ಉರುವಾಲು: ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅನುದಾನಿತ ಶಾಲಾ ಮುಖ್ಯ ಶಿಕ್ಷಕ ಸಣ್ಣಪ್ಪ ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಬಳಿಕ ಎಲ್ಲಾ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಗಾಯನ ಹಾಗೂ ಬ್ಯಾಂಡ್ ತಂಡದೊಂದಿಗೆ ಶಾಲಾ ಮೈದಾನದಲ್ಲಿ ಪಥ ಸಂಚಲನ ನಡೆಯಿತು.
ಈ ಸಂದರ್ಭದಲ್ಲಿ ಪೋಷಕರು, ಗ್ರಾಮಸ್ಥರು ಹಾಗೂ ಸೇವಾ ಸಮಿತಿಯ ಸದಸ್ಯರು ಎಲ್ಲರೂ ಹಾಜರಿದ್ದರು. ಬಳಿಕ ಶಾಲಾ ವಿದ್ಯಾರ್ಥಿಗಳು ಉರುವಾಲು ಪದವು ವರೆಗೆ ಘೋಷಣಾ ವಾಖ್ಯಗಳೊಂದಿಗೆ ಮೆರವಣಿಗೆ ಹೋದರು. ಉರುವಾಲು ಪದವು ಇಲ್ಲಿನ ಗ್ರಾಮಸ್ಥರು ಕೂಡಿಕೊಂಡು ಎಂದಿನಂತೆ ಶಾಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸಿಹಿ ತಿಂಡಿ ವಿತರಿಸಿದರು. ಬಳಿಕ ಶಾಲಾ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಇದನ್ನು ನೆರವೇರಿಸಲು ಗೈಡ್ ಕ್ಯಾಪ್ಟೇನ್ ಆಗಿರುವ ಉಷಾ ಕೆ, ಸಹ ಶಿಕ್ಷಕಿ SDM, ಶಾಲೆ ಉಜಿರೆ (CBSE) ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಬಳಿಕ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಸ್ಕಾರ್ಫ್ ಹಾಗೂ ಬ್ಯಾಡ್ಜ್ ಪ್ರಧಾನ ನೆರವೇರಿಸಿ ಶುಭಾಶಯ ತಿಳಿಸಿದರು. ಎಲ್ಲಾ ಅತಿಥಿಗಳನ್ನು ಶಾಲಾ ಮುಖ್ಯ ಶಿಕ್ಷಕಿ ಶೋಭಿತ ಕೆ ಆರ್ ಸ್ವಾಗತಿಸಿದರು. ಸಹ ಶಿಕ್ಷಕಿ ಸುಚಿತ ಧನ್ಯವಾದ ಅರ್ಪಿಸಿದರು ಹಾಗೂ ಸಹ ಶಿಕ್ಷಕ ಮಂಜು ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರೈತ ಬಂಧು, ಮಾರುತಿ ಪುರ ನೀಡಿದ ಸಿಹಿ ತಿನಿಸುಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಯಿತು.