Site icon Suddi Belthangady

ಸುಲ್ಕೇರಿಮೊಗ್ರು: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

ಸುಲ್ಕೇರಿಮೊಗ್ರು: ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಸುಲ್ಕೇರಿಮೊಗ್ರು ಇವರ ನೇತೃತ್ವದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆಯು ನಡೆಯಿತು.

ಈ ಸಂದರ್ಭದಲ್ಲಿ ಮಹಿಳೆಯರು, ಮುತ್ತೈದೆಯರು ಹೆಚ್ಚಿನ ಸಂಖ್ಯೆಯಲ್ಲಿ ಪೂಜೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಆಡಳಿತ ಸಮಿತಿ, ವ್ಯವಸ್ಥಾಪನಾ ಸಮಿತಿ, ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ, ಸುಲ್ಕೇರಿಮೊಗ್ರು ಮತ್ತು ಅರ್ಚಕವೃಂದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎ ಮತ್ತು ಬಿ ಒಕ್ಕೂಟದ ಸದಸ್ಯರು ಮತ್ತು ಜ್ಞಾನ ವಿಕಾಸ, ಪ್ರಗತಿಬಂಧು ತಂಡದ ಸದಸ್ಯರು ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸುಲ್ಕೇರಿಮೊಗ್ರು ಸಹಕರಿಸಿದರು.

Exit mobile version