Site icon Suddi Belthangady

ಕುದ್ಯಾಡಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ- ನಿವೃತ್ತ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ

ಕುದ್ಯಾಡಿ: ಕುದ್ಯಾಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ನಿವೃತ್ತ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಜರಗಿತು.ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ಧ್ವಜಾರೋಹಣ ನೆರವೇರಿಸಿದರು.ಬಳಿಕ ನಡೆದ ಸಮಾರಂಭದಲ್ಲಿ, ಶಾಲೆಯಲ್ಲಿ 12 ವರ್ಷ ಮುಖ್ಯ ಶಿಕ್ಷಕರಾಗಿದ್ದು, ಇತ್ತೀಚೆಗೆ ಸೇವಾನಿವೃತ್ತಿ ಹೊಂದಿದ ಡೀಕಯ್ಯ ಪೂಜಾರಿ ಕುತ್ಲೂರು ಅವರನ್ನು ಸನ್ಮಾನಿಸಲಾಯಿತು. ನಿವೃತ್ತರು ಇದೇ ಸಂದರ್ಭದಲ್ಲಿ ಶಾಲೆಗೆ 25,000 ದೇಣಿಗೆ ನೀಡಿದರು.

ಪ್ರಗತಿಪರ ಕೃಷಿಕರು ಹಾಗೂ ದಾನಿಗಳಾದ ವಿಶ್ವನಾಥ ಪೂಜಾರಿ ಕುದ್ಯಾಡಿಗುತ್ತು, ಶಶಿಕಾಂತ ಜೈನ್ ಮುಂಡಾಜೆಗುತ್ತು, ಸುಲ್ಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶುಭಕರ ಪೂಜಾರಿ, ಸದಸ್ಯೆ ಯಶೋದಾ ಎಲ್. ಬಂಗೇರ ಅತಿಥಿಗಳಾಗಿದ್ದರು.ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಶಿಕ್ಷಕ ನಾಗಭೂಷಣ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷರಾದ ಸುಂದರ ಆಚಾರ್ಯ ಅಂತರೊತ್ತು, ಶ್ರೀಧರ ಪೂಜಾರಿ ಉಮನೊಟ್ಟು, ಜಯರಾಮ ಆಚಾರ್ಯ ಕುದ್ಯಾಡಿ, ಅಳದಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ವಸಂತಿ ಸಿ. ಪೂಜಾರಿ, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಪ್ರಗತಿ ಬಂಧು ಒಕ್ಕೂಟದ ಮಾಜಿ ಅಧ್ಯಕ್ಷೆ ತಾರಾ ಲಕ್ಷ್ಮಣ ಆಚಾರ್ಯ, ಸೇವಾ ಪ್ರತಿನಿಧಿ ಮಮತಾ ಉಪಸ್ಥಿತರಿದ್ದರು.ಶಾಲೆಯ ಅತಿಥಿ ಶಿಕ್ಷಕಿ ರೇಖಾ ಅವರು ಸನ್ಮಾನಿತರ ಪರಿಚಯ ನೀಡಿದರು. ವಂದನಾರ್ಪಣೆಗೈದರು.

ಕುದ್ಯಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಸ್ವಾಗತಿಸಿದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಸದ್ಧರ್ಮ ಯುವಕ ಮಂಡಲದ ಅಧ್ಯಕ್ಷ ಸದಾನಂದ ಬಿ. ಕುದ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Exit mobile version