Site icon Suddi Belthangady

ಕಲ್ಮಂಜ: ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕಲ್ಮಂಜ: ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಯುವ ಜನಾಂಗದ ಕರ್ತವ್ಯ. ಯುವ ಜನತೆ ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಸತ್ರ್ಪಜೆಗಳಾಗಿ ಭಾರತವನ್ನು ವಿಶ್ವಗುರುವಾಗಿಸಬೇಕು ಎಂದು ಕಲ್ಮಂಜ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಗೈದು ಮಂಜುನಾಥ ಶೆಟ್ಟಿಯವರು ನುಡಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷೆ ವಿಮಲಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.

ಗ್ರಾಮ ಪಂಚಾಯತ್ ಸದಸ್ಯೆ ಲೀಲಾ, ವಿದ್ಯಾಭಿಮಾನಿಗಳಾದ ಮಹಮ್ಮದ್ ಮುಜೀದ್, ಹಮೀದ್,ˌ ಕರುಣಾಕರ,ˌ ಕೊರಗಪ್ಪ, ˌಮೋನಪ್ಪ,ˌ ಸುಧೀರ್ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಪೂರ್ಣಿಮಾ ಜೈನ್ ಸ್ವಾಗತಿಸಿದರು.

ಶಿಕ್ಷಕಿಯರಾದ ಮಾಲಿನಿ ಹೆಗಡೆ, ಹೇಮಲತಾ, ಪ್ರೇಮಲತಾ, ಸವಿತಾ, ಸಾವಿತ್ರಿ ಸಿ ಡಿ, ಪ್ರೇಮಾ ಯಚ್ ವಿ ಹಾಗೂ ಸುಧೀಂದ್ರ ಸಹಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಭಾಷಣ ದೇಶಭಕ್ತಿಗೀತೆ ಯೋಗ ನೃತ್ಯ ಹಾಗೂ ಮಿಮಿಕ್ರಿ ಕಾರ್ಯಕ್ರಮ ನಡೆಯಿತು.ಮುಕ್ಷಿತಾ ನಿರೂಪಿಸಿ, ಸಾಕ್ಷಿ ಸ್ವಾಗತಿಸಿ, ಕಾವ್ಯ ಧನ್ಯವಾದವಿತ್ತರು.

Exit mobile version