Site icon Suddi Belthangady

ಕಲ್ಮಂಜ: ಗ್ರಾಮ ಪಂಚಾಯತ್ ಪ್ರಥಮ ಸುತ್ತಿನ ಗ್ರಾಮಸಭೆ- ಪಜಿರಡ್ಕ ನೀರಿನ ಪೈಪ್ ಲೈನ್ ಸಮಸ್ಯೆ ಹೇಳಿದರೆ ಬೇಜವಬ್ದಾರಿ ಉತ್ತರ- ಕೃಷಿ ಇಲಾಖೆಯಿಂದ ಸರಿಯಾದ ಸ್ಪಂದನೆ ಇಲ್ಲ: ಗ್ರಾಮಸ್ಥರು

ಕಲ್ಮಂಜ: ಕಲ್ಮಂಜ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷೆ ವಿಮಲ ರವರ ಅಧ್ಯಕ್ಷತೆಯಲ್ಲಿ ಆ.16ರಂದು ಕಲ್ಮಂಜ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ವೇದಿಕೆಯಲ್ಲಿ ಮಾರ್ಗದರ್ಶಕ ಅಧಿಕಾರಿಯಾಗಿ ಬೆಳ್ತಂಗಡಿಯ ಪಶುಸಂಗೋಪನೆ ಪಶುಆಸ್ಪತ್ರೆಯ ಅಧಿಕಾರಿ ವಿಶ್ವಾನಾಥ್ ಸಿ.ಎನ್, ಗ್ರಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ, ಗ್ರಾ.ಪಂ. ಸದಸ್ಯರಾದ ಎಂ.ಶ್ರೀಧರ್, ಕೃಷ್ಣ ಮೂರ್ತಿ, ಲೀಲಾ, ಪ್ರವೀಣ, ಸವಿತಾ, ಶೋಭಾವತಿ, ಆಶಾಕಾರ್ಯಕರ್ತೆಯರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನೂ ಗ್ರಾಮಸ್ಥರಿಗೆ ಕೃಷಿಯ ಬಗ್ಗೆ ಗ್ರಾಮ ಮಟ್ಟದಲ್ಲಿ ಮಾಹಿತಿ ನೀಡಬೇಕು, ಕೃಷಿ ಇಲಾಖೆಯಲ್ಲಿ ಜನರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥ ಶಿವರಾಮ್ ತಿಳಿಸಿದರು.

ಪಜಿರಡ್ಕ ಬಳಿ ಹೊಸ ಪೈಪ್ ಲೈನ್ ಮಾಡಿರುತ್ತಾರೆ ಪ್ರತಿ ಮನೆಯಲ್ಲೂ ಪೈಪ್ ಲೈನ್ ಸಮಸ್ಯೆ ಇದೆ.ಸರಿಯಾಗಿ ನೀರು ಬಿಡುವುದಿಲ್ಲ, ಪೈಪ್ ಹೊಡೆದು ನೀರು ಪೋಲಾಗುತ್ತಿದೆ ಕೇಳಿದರೆ ನೀರು ಸರಬರಾಜು ಮಾಡುವ ವ್ಯಕ್ತಿಯಿಂದ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥ ಸುಂದರೇಶ್ ಹೇಳಿದರು.ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಸರಕಾರದ ವಿವಿಧ ಯೋಜನೆಗಳ ಬಗ್ಗೆ ಗ್ರಾಮಸ್ಥರಿಂದ ಅರ್ಜಿಯನ್ನು ಸ್ವೀಕರಿಸಲಾಯಿತು. ಹಾಗೂ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.

ಗ್ರಾಮ ಪಂಚಾಯತ್ ಕಾರ್ಯದರ್ಶಿ ಸರೋಜಿನಿ.ಕೆ ಖರ್ಚು ಹಾಗೂ ವಾರ್ಡ್ ಸಭೆಯಲ್ಲಿ ಬಂದ ಪ್ರಸ್ತಾವನೆಗಳನ್ನು ಓದಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ.ಆರ್ ಸಾಲಿಯಾನ್ ಸ್ವಾಗತಿಸಿದರು.

Exit mobile version