Site icon Suddi Belthangady

ಕಾಶಿಪಟ್ಣ: ಮುಹಿಯುದ್ದೀನ್ ಜುಮಾ ಮಸೀದಿ, ಹಿದಾಯತುಲ್ ಇಸ್ಲಾಂ ಮದ್ರಸ, ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಕಾಶಿಪಟ್ಣ: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಕಾಶಿಪಟ್ಟ ಶಾಖೆ ವತಿಯಿಂದ ಸ್ವಾತಂತ್ರ್ಯ ದಿನ ಕಾರ್ಯಕ್ರಮ ನಡೆಯಿತು.

ಹಿದಾಯತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಜಮಾಅತ್ ಅಧ್ಯಕ್ಷ ಕೆ ಎಸ್ ಪುತ್ತುಮೋನು ಅವರು ಧ್ವಜಾರೋಹಣ ಮಾಡಿದರು.

ಮದ್ರಸ ಮುಹಲ್ಲಿಮ್ ಅಕ್ಬರ್ ಅಲಿ ಅಜ್ಹರಿ ಮಾಡನ್ನೂರು ಪ್ರಾರ್ಥಿಸಿ ಸಂದೇಶ ನೀಡಿದರು.ಜಮಾಅತ್ ಸೆಕೆಟ್ರಿ ಪಿ ಹೆಚ್ ಅಬ್ದುರಹ್ಮಾನ್,ಖಜಾಂಜಿ ಕೆ ಎಸ್ ಇಸ್ಮಾಯಿಲ್, ಎಸ್.ಕೆ.ಎಸ್.ಎಸ್.ಎಫ್ ಪಂಡತಡ್ಕ ಕ್ಲಸ್ಟರ್ ಪ್ರೆಸಿಡೆಂಟ್ ಖಾಲಿದ್, ಎಸ್.ಕೆ.ಎಸ್.ಎಸ್.ಎಫ್ ಸೆಕೆಟ್ರಿ ಸಹದ್, ಹಾಗೂ ಊರಿನವರು ಮತ್ತು ಮದ್ರಸ ಮಕ್ಕಳು ಉಪಸ್ಥಿತರಿದ್ದರು.ಎಸ್.ಕೆ.ಎಸ್.ಎಸ್.ಎಫ್ ಪ್ರೆಸಿಡೆಂಟ್ ಹಮೀದ್ ವಂದಿಸಿದರು.

Exit mobile version