Site icon Suddi Belthangady

ಅರಸಿನಮಕ್ಕಿ: ಅರಿಕೆಗುಡ್ಡೆ ವನದುರ್ಗ ದೇವಳದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

ಅರಸಿನಮಕ್ಕಿ: ಇತ್ತಿಚೆಗೆ ಬ್ರಹ್ಮಕಲಶೋತ್ಸವ ಮುಗಿದು ಅರಿಕೆಗುಡ್ಡೆಯಲ್ಲಿ ನೆಲೆನಿಂತಿರುವ ಶ್ರೀ ವನದುರ್ಗ ದೇವಳದಲ್ಲಿ ವರಮಹಾಲಕ್ಷ್ಮಿ ದಿನದ ಪ್ರಯುಕ್ತ ಸಾಮೂಹಿಕವಾಗಿ ವರಮಹಾಲಕ್ಷ್ಮಿ ಪೂಜೆಯನ್ನು ದೇವಳದ ಟ್ರಸ್ಟ್ ನವರು ಆಯೋಜಿಸಿದ್ದು, ಈ ವಿಶೇಷ ಸಂಧರ್ಭದಲ್ಲಿ ರೇಣುಕಾ ಸುಧೀರ್ ರವರು ವರಮಹಾಲಕ್ಷ್ಮಿ ಪೂಜೆಯ ಮಹತ್ವವನ್ನು ಭಕ್ತರಿಗೆ ತಿಳಿಸಿದರು.

ದೇವಳದ ಅರ್ಚಕರಾದ ಉಲ್ಲಾಸ್ ಭಟ್ ಮತ್ತು ಶ್ರೇಯಸ್ ಪೂಜಾ ವಿಧಾನ ಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಳದ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ವೃಶಾಂಕ್ ಖಾಡಿಲ್ಕರ್, ಜಯಪ್ರಸಾದ್, ನೀತಾ, ರೋಹಿತಾಕ್ಷ ಶೆಟ್ಟಿಗಾರ್, ಕೇಶವ ನೆಕ್ಕಿಲು, ರಾಮಕೃಷ್ಣ ಉಪಸ್ಥಿತರಿದ್ದರು.

Exit mobile version