ಬೆಳಾಲು: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯಲ್ಲಿ 78ನೇ ಸ್ವಾತಂತ್ರ್ಯದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಾಧವ ಗೌಡ ಓಣಾಜೆ ಧ್ವಜಾರೋಹಣ ನೆರವೇರಿಸಿದರು.ನಂತರ ವಿದ್ಯಾರ್ಥಿಗಳು,ಪೋಷಕರು ಮೆರವಣಿಗೆಯ ಮೂಲಕ ಸಾಗಿ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಮಡಿದ ನಾಯಕರಿಗೆ ಜೈಕಾರ ಕೂಗಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಗೆ ವಿವಿಧ ಕೊಡುಗೆಗಳನ್ನು ನೀಡಿದ ದಾನಿಗಳಾದ ಪ್ರಿಂಟರ್ ಕೊಡುಗೆ ನೀಡಿದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿ ಹರೀಶ್ ಗೌಡ, ಬ್ಯಾಂಡ್ ಸೆಟ್ ದಾನಿಗಳಾದ ಯೋಗೀಶ್ ಗೌಡ ಸೌತೆಗದ್ದೆ, ಕಂಪ್ಯೂಟರ್ ದಾನಿಗಳಾದ ವಿಜಯ ಗೌಡ ಸೌತೆಗದ್ದೆ, ಸ್ಟೀಲ್ ತಟ್ಟೆ ಮತ್ತು ಲೋಟ ದಾನಿಗಳಾದ ಜಯಣ್ಣ ಗೌಡ ಮಿನಂದೇಲು ಮತ್ತು ರಂಜನ್ ಗೌಡ ಪನ್ನಾಜೆ ಇವರುಗಳನ್ನು ಶಾಲಾ ಪರವಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯರ ಕೃಷ್ಣಯ್ಯ ಆಚಾರ್ಯ, ಸಿ.ಆರ್.ಪಿ. ಪ್ರತಿಮ, ಎಸ್.ಕೆ.ಡಿ.ಆರ್.ಪಿ.ಯ ಸೇವಾ ಪ್ರತಿನಿಧಿ ಪ್ರಮೀಳಾ,
ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಲೇಖಾವತಿ, ಶಾಲಾ ನಾಯಕ ಮನ್ವಿತ್ ಎಂ.ಎಸ್. ಉಪಸ್ಥಿತರಿದ್ದರು.
ಜ್ಙಾನದೀಪ ಶಿಕ್ಷಕ ಕರಿಯಣ್ಣ ಗೌಡ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಎಂ.ವಂದಿಸಿದರು.ಅತಿಥಿ ಶಿಕ್ಷಕಿ ಹರಿಣಾಕ್ಷಿ ಎನ್. ನಿರೂಪಿಸಿದರು.ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು,ಸಿಹಿಯೂಟದೊಂದಿಗೆ ಸಂಪನ್ನಗೊಂಡಿತು.