ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು ವಿಭಾಗ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸೆ. 7ರಂದು ನಡಯುವ 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಆ.14ರಂದು ಬೆಳಾಲು ಶ್ರೀ ಧ.ಮ. ಪ್ರೌಢ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯರಾಮ ಮಯ್ಯ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ, ನಿಕಟ ಪೂರ್ವ ಅಧ್ಯಕ್ಷ ಶಿವಕುಮಾರ್ ಬಾರಿತ್ತಾಯ, ಮಾಜಿ ಅಧ್ಯಕ್ಷ ಗಣೇಶ್ ಕನಿಕ್ಕಿಲ, ಮಾಜಿ ಕಾರ್ಯದರ್ಶಿ ಹರೀಶ್ ಆಚಾರ್ಯ, ಕಾರ್ಯದರ್ಶಿ ರಾಮಚಂದ್ರ ಗೌಡ, ಕೋಶಾಧಿಕಾರಿ ದಿವಾಕರ ಆಚಾರ್ಯ, ಯೋಜನೆಯ ಮೇಲ್ವಿಚಾರಕಿ ವನಿತಾ, ಬೆಳಾಲು ಒಕ್ಕೂಟದ ಅಧ್ಯಕ್ಷ ರತ್ನಾಕರ ಆಚಾರ್ಯ, ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ರೋಹಿತಾಕ್ಷ ಆಚಾರ್ಯ,ಸೇವಾ ಪ್ರತಿನಿಧಿಗಳಾದ ಪ್ರಮೀಳಾ, ಪ್ರಭಾವತಿ, ತಾರಾನಾಥ್ ಸದಸ್ಯರು ಹಾಜರಿದ್ದರು.