Site icon Suddi Belthangady

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ಇದರ ನೇತೃತ್ವದಲ್ಲಿ ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳಿಗೋಸ್ಕರ ನಡೆಸುತ್ತಿರುವ ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಇದರ ಅಡಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಎಸ್.ಎಂ.ವೈ.ಎಂ ಧರ್ಮಪ್ರಾಂತ್ಯ ಬೆಳ್ತಂಗಡಿ, ಕೃಪ ಸ್ವ-ಸಹಾಯ ಸಂಘ ತೋಟತ್ತಾಡಿ ಇವುಗಳ ಸಹಕಾರದೊಂದಿಗೆ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಎಸ್.ಎಂ.ವೈ .ಎಂ, ಮಾತೃವೇದಿ, ಫ್ಯಾಮಿಲಿ ಅಪೋಸ್ಟೆಲೆಟ್ ಬೆಳ್ತಂಗಡಿ ಈ ಸಂಘಟನೆಗಳ ನಿರ್ದೇಶಕರಾದ ವಂ.ಫಾದರ್ ಜೋಬಿ ಪುಲ್ಲಾಟ್ ಇವರು ಆಗಮಿಸಿ, ಶೋಷಿತ ವರ್ಗದವರಿಗೋಸ್ಕರ ಸಂಸ್ಥೆಯು ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಅಭಿನಂದಿಸುತ್ತಾ, ಜೀವನದಲ್ಲಿ ಪರಸ್ಪರ ಜೊತೆಯಾಗಿ ನಿಲ್ಲುವ ಮೂಲಕ ವಂಚಿತರಾಗುತ್ತಿರುವ ವ್ಯಕ್ತಿಗಳ ಹಕ್ಕುಗಳಿಗೋಸ್ಕರ ಪ್ರವೃತಿಸಬೇಕೆಂದು ಕರೆ ನೀಡಿದರು. ನೂತನವಾಗಿ ಎಸ್.ಎಂ.ವೈ.ಎಂ ಬೆಳ್ತಂಗಡಿ ಧರ್ಮಪ್ರಂತ್ಯದ ಅಧ್ಯಕ್ಷರಾಗಿರುವ ಸಿರಿನ್ ತೋಮಸ್ ಇವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸುತ್ತಾ, ಭಾರತೀಯರು ನಿಷ್ಠಾವಂತ ಪ್ರಜೆಗಳಾಗಿ ಬದುಕುವ ಮೂಲಕ ಸಮಾಜದ ಯಶಸ್ವಿಗೆ ಕಾರಣರಾಗಬೇಕು ಎಂದು ಕರೆ ನೀಡಿದರು. ಕೃಪ ಸಂಘ ತೋಟತ್ತಾಡಿ ಇದರ ಅಧ್ಯಕ್ಷೆ ಜಯ ಇವರ ನೇತತ್ವದಲ್ಲಿ ಇವತ್ತಿನ ಕಾರ್ಯಕ್ರಮದ ಊಟದ ವ್ಯವಸ್ಥೆಗೆ ಆರ್ಥಿಕ ನೆರವನ್ನು ನೀಡಿ ಶುಭಹಾರೈಸಿದರು.

ಅತಿಥಿ ಗಣ್ಯರು ಜೋತೆ ಸೇರಿ ಪೌಷ್ಟಿಕ ಆಹಾರದ ಕಿಟ್ ಗಳನ್ನು ವಿತರಿಸಿದರು.ಎಸ್.ಎಂ.ವೈ.ಎಂ.ಬೆಳ್ತಂಗಡಿ, ನವಜೀವನ ಸಂಘದ ಸದಸ್ಯೆ ಇವರಿಂದ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ.ಜೆ ದೇಶಕೋಸ್ಕರ ನಮ್ಮತನದ ಕೊಡುಗೆಗಳನ್ನು ನೀಡುವ ಮೂಲಕ ರಾಷ್ಟ್ರ ನಿರ್ಮಾಣದ ವಿನೂತನ ಹೆಜ್ಜೆಗಳನ್ನು ಇಡಲು ಶ್ರಮಿಸಬೇಕೆಂದು ಕರೆ ನೀಡುತ್ತಾ ಪ್ರಾಸ್ತಾವಿಕ ನುಡಿಯನ್ನಾಡಿದರು.

ಪುಷ್ಪರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಶಾರದಾ ರವರು ಪ್ರಾರ್ಥನೆ ಹಾಡಿದರು. ಕು.ಭರತ್ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿ ರೋಶ್ನಿ ನಿಲಯ, ಮಂಗಳೂರು ಇವರು ಎಲ್ಲರನ್ನೂ ಸ್ವಾಗತಿಸಿದರು. ಜಾನ್ಸನ್ ಕಾರ್ಯಕರ್ತರು ಡಿ.ಕೆ.ಆರ್.ಡಿ .ಎಸ್ ಬೆಳ್ತಂಗಡಿ ಇವರು ವಂದಿಸಿದರು.

ಸಂಯೋಜಕಿ ಕು.ಶ್ರೇಯ ರವರು ಕಾರ್ಯಕ್ರಮ ನಿರೂಪಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾತು.

Exit mobile version