Site icon Suddi Belthangady

ಬೆಳ್ತಂಗಡಿ ವಲಯದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಕುವೆಟ್ಟು: ದ.ಕ, ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿ ವಲಯದ ಮಾಜಿ ಅಧ್ಯಕ್ಷ ಹಿರಿಯರಾದ ಗೋಪಾಲ್ ಎನ್ ಎ ಅಳದಂಗಡಿ ದ್ವಜಾರೋಹಣ ನೆರವೇರಿಸಿದರು.

ವಲಯದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿ ಶುಭಾಶಯ ಹೇಳಿದರು.

ಈ ಸಂದರ್ಭದಲ್ಲಿ ವಲಯದ ಗೌರವಾಧ್ಯಕ್ಷ ಜಗದೀಶ್ ಜೈನ್ ದರ್ಮಸ್ಥಳ, ಅಧ್ಯಕ್ಷೆ ಸಿಲ್ವಿಯಾ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ವಿಜಯ ಎಚ್ ಭಟ್ ಮತ್ತು ಮಾಜಿ ಅಧ್ಯಕ್ಷರುಗಳು, ಪಧಾದಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Exit mobile version