Site icon Suddi Belthangady

ಸಂಸ್ಕಾರಯುತ ಶಿಕ್ಷಣದಿಂದ ನಶಾ ಮುಕ್ತ ಭಾರತ ಕಟ್ಟೋಣ- ಪಟ್ಟೂರು ಶ್ರೀರಾಮದಲ್ಲಿ ಒಕ್ಕೊರಲ ಪ್ರತಿಜ್ಞೆ

ಕೊಕ್ಕಡ: ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗುರುಪ್ರಸಾದ್ ನಿಡ್ವಣ್ಣಾಯ ಧ್ವಜಾರೋಹಣ ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಶಮುಕ್ತ ಭಾರತ ವಿಷಯದ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೇಟ್ ಮಾತನಾಡಿ, ವ್ಯಸನಗಳಿಂದ ಮುಕ್ತವಾದಂತಹ ದೇಶ ನಿರ್ಮಾಣಕ್ಕೆ ಭವಿಷ್ಯದ ಪ್ರಜೆಗಳಾದ ನೀವು ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಆರೋಗ್ಯಕರ ಸಮಾಜ ನಿರ್ಮಿಸುವುದರೊಂದಿಗೆ ಸದೃಡ ದೇಶವನ್ನು ಕಟ್ಟಬೇಕು ಎಂದರು.

ಭವಿಷ್ಯದ ಭಾರತವು ಆರೋಗ್ಯಕರ, ನಶಾ ಮುಕ್ತ ಭಾರತವಾಗಿರಬೇಕು. ಅದಕ್ಕಾಗಿ ಯುವಸಮುದಾಯ ಶಾಲಾ ಜೀವನದಿಂದಲೇ ನಶಮುಕ್ತ ಜೀವನದ ಸಂಕಲ್ಪ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಮಾತನಾಡಿ ಸಂಸ್ಕಾರಯುತ ಶಿಕ್ಷಣ ದೊರೆತಾಗ ವ್ಯಸನಗಳಿಂದ ವಿದ್ಯಾರ್ಥಿಗಳು ದೂರವಿರುತ್ತಾರೆ. ನಶಾ ಮುಕ್ತ ಭಾರತಕ್ಕಾಗಿ ಜೊತೆಗೂಡಿ ಶ್ರಮಿಸೋಣ ಎಂದರು. ಸಹ ಶಿಕ್ಷಕಿ ಸ್ವಾತಿ ಕೆ.ವಿ. ನಶಾ ಮುಕ್ತ ಭಾರತದ ಸಂಕಲ್ಪ ತೊಡಲು ಪ್ರತಿಜ್ಞೆಯನ್ನು ಬೋಧಿಸಿದರು. ಸಹ ಶಿಕ್ಷಕಿ ದಿವ್ಯ ಎ. ವಂದಿಸಿದರು.

Exit mobile version