Site icon Suddi Belthangady

ಬೆಳ್ತಂಗಡಿ: ವರ್ತಕರ ಸಂಘ ಹಾಗೂ ಮಂಜುಶ್ರೀ ಸೀನಿಯರ್ ಛೇಂಬರ್ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಬೆಳ್ತಂಗಡಿ: 78ನೇ ಸ್ವಾತಂತ್ರ್ಯೋತ್ಸವವನ್ನು ಬೆಳ್ತಂಗಡಿ ವರ್ತಕರ ಸಂಘ ಹಾಗೂ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಜತೆಗೆ ಸೇರಿ ಸಂತೆಕಟ್ಟೆ ಬಳಿಯಲ್ಲಿರುವ ಟಿವಿಎಸ್ ಲೋಬೊ ಮೋಟರ್ಸ್ ಇದರ ಎದುರುಗಡೆ ವಿಜೃಂಭಣೆಯಿಂದ ಆಚರಿಸಲಾಯಿತು.

ಟಿವಿಎಸ್ ಲೋಬೊ ಮೋಟಾರ್ ಇದರ ಮಾಲಕ ರೋನಾಲ್ಡ್ ಲೋಬೊರವರು ಎಲ್ಲರಿಗೂ ಸ್ವಾಗತಿಸಿದರು.ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಹಾಗೂ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರ್ ಇದರ ಅಧ್ಯಕ್ಷ ಸೀನಿಯರ್ ಪಿಪಿಎಫ್ ವಾಲ್ಟರ್ ಸಿಕ್ವೇರಾರವರು ರಾಷ್ಟ್ರಧ್ವಜವನ್ನು ಹಾರಿಸಿ ಶುಭಾಶಯ ಕೋರಿ ಗೌರವವನ್ನು ಸಮರ್ಪಿಸಿದರು.

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರಿನ ಕಾರ್ಯದರ್ಶಿಗಳಾದ ಸೀನಿಯರ್ ಪಿಪಿಎಫ್ ಜಾನ್ ಅರ್ವಿನ್ ಡಿ’ಸೋಜಾರವರು ದೇಶದ ಸ್ವಾತಂತ್ರ್ಯಕ್ಕಾಗಿ ಹೊರಾಡಿ ತಮ್ಮ ಜೀವವನ್ನೇ ತ್ಯಾಗಮಾಡಿ ಅಮರರಾದ ಎಲ್ಲರನ್ನೂ ಸ್ಮರಿಸಿ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ನೀಡಿದರು.

ಟಿವಿಎಸ್ ಲೋಬೊ ಮೋಟರ್ಸ್ ಇದರ ಎಲ್ಲಾ ಸಿಬ್ಬಂದಿ ವರ್ಗದವರು, ಬೆಳ್ತಂಗಡಿ ವರ್ತಕರ ಸಂಘದ ಸದಸ್ಯರು, ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರ್ ಇದರ ಸದಸ್ಯರು ಹಾಗೂ ಊರಿನ ಗಣ್ಯವ್ಯಕ್ತಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದರು.

Exit mobile version