ಬೆಳ್ತಂಗಡಿ: ತಾಲೂಕಿನ ಮುಂಚೂಣಿ ಸಹಕಾರಿ ಸಂಸ್ಥೆ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು 2023-24ನೇ ಸಾಲಿನ ಅತ್ಯುತ್ತಮ ಕಾರ್ಯವೈಖರಿ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಜಿಲ್ಲಾ ಮಟ್ಟದ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ.
ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು ಏಳು ಶಾಖೆಗಳನ್ನು ಹೊಂದಿದ್ದು, 2023-24ನೇ ಸಾಲಿನಲ್ಲಿ 1020.89 ಕೋಟಿ ರೂ. ವ್ಯವಹಾರ ನಡೆಸಿ 127.11 ಕೋಟಿ ರೂ. ಠೇವಣಿ ಹಾಗೂ 175.02 ಕೋಟಿ ರೂ. ಸಾಲ ಹೊಂದಿದೆ. 4.30 ಕೋಟಿ ರೂ. ಲಾಭ ಗಳಿಸಿದೆ.
ಆ.14ರಂದು ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಹಾಗೂ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್‌ರನ್ನು ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಡಾ||ಎಂ.ಎನ್.ರಾಜೇಂದ್ರ ಕುಮಾರ್ ಸನ್ಮಾನಿಸಿದರು.
ಬ್ಯಾಂಕಿನ ನಿರ್ದೇಶಕರರಾದ ಕುಶಾಲಪ್ಪ ಗೌಡ ಪೂವಾಜೆ, ಶಶಿಕುಮಾರ್ ರೈ ಹಾಗೂ ದ.ಕ.ಜಿ,ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರು, ಹಾಗೂ ಬಂಗಾಡಿ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ವಸಂತ ಗೌಡ .ಕೆ , ನಿರ್ದೇಶಕರಾದ ರಮೇಶ್ ಕೆಂಗಾಜೆ, ವಿನಯ ಚಂದ್ರ ಕಿಲ್ಲೂರು, ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವೃತ್ತಿಪರ ನಿರ್ದೇಶಕತು ಪುಷ್ಪಲತಾ. ಕೆ, ವಿಜಯ, ಸಿಬ್ಬಂದಿಗಳಾದ ಸಹಾಯಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಕಾಂತ್ ಗೌಡ ಕೆ, ಬಾಲಕೃಷ್ಣ ಸುವರ್ಣ, ರಮಾನಂದ. ಕೆ ಹಾಗೂ ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು.