ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಂಗ್ಮ ಮಾಧ್ಯಮ ಶಾಲೆಯಲ್ಲಿ ಪೋಸ್ಕೋ ಕಾಯ್ದೆ, ದುಶ್ಚಟಗಳ ಹಾಗೂ ಮಾದಕ ವ್ಯಸನದ ಕುರಿತು ಹಾಗೂ ಉತ್ತಮ ಹಾಗೂ ಕೆಟ್ಟ ಸ್ಪರ್ಶ ಯಾವುದು ಎಂಬಿತ್ಯಾದಿ ವಿಚಾರಗಳ ಕುರಿತು ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಡಾ.ಅಕ್ಷತಾ ಕೆ ಆಗಮಿಸಿ ಪೋಸ್ಕೋ ಕಾಯ್ದೆ, ಉತ್ತಮ ಸ್ಪರ್ಶ ಹಾಗೂ ಉತ್ತಮ ಅಲ್ಲದ ಸ್ಪರ್ಶ, ದುಶ್ಚಟಗಳ ಪರಿಣಾಮ, ಮಾದಕ ವ್ಯಸನದ ಪರಿಣಾಮ, ಸಮಾಜದಲ್ಲಿ ಹೇಗಿರಬೇಕು, ಲೈಂಗಿಕ ದೌರ್ಜನ್ಯ ಅಂದರೆ ಏನು, ಮಾಡಿದರೆ ಏನು ಶಿಕ್ಷೆ, ಎಂಬಿತ್ಯಾದಿ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಹಲವು ಉದಾಹರಣೆ ಹಾಗೂ ಪಿಪಿಟಿ ಮುಖಾಂತರ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ಬಳಿಕ ವಿದ್ಯಾರ್ಥಿಗಳ ಪ್ರಶ್ನೋತ್ತರ ಮುಖಾಂತರ ತಮ್ಮ ಸಂದೇಹವನ್ನು ಪರಿಹರಿಸಿದರು.ಶಾಲಾ ಸಹಶಿಕ್ಷಕಿ ಅಂಜು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಸ್ವಾಗತಿಸಿ, ಶಿಭ ಧನ್ಯವಾದ ಇತ್ತರು.ಶಾಲಾ ಸುರಕ್ಷಾ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.