ಬೆಳ್ತಂಗಡಿ: ಗುರುವಾಯನಕೆರೆಯಿಂದ ಕಕ್ಕಿಂಜೆ 33/11 ಕೆವಿ ವಿದ್ಯುತ್ ಉಪಕೇಂದ್ರ, 33 ಕೆಪಿ ಪೆಟ್ರೋನೆಟ್ ಸ್ಥಾವರ ಹಾಗೂ ಹೆಚ್.ಪಿ.ಸಿ.ಎಲ್ ಸ್ಥಾವರಕ್ಕೆ ವಿದ್ಯುತ್ ಸರಬರಾಜು ಆಗುತ್ತಿರುವ 33 ಕೆವಿ ಕಕ್ಕಿಂಜಿ ಹಾಗೂ ಸಿಲಿಕ್ಕಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿಯ ಪ್ರಯುಕ್ತ, ಪಿಲಿಕ್ಕಳ, ಚಾರ್ಮಾಡಿ ಹಾಗೂ ಮುಂಡಾಜೆ ಫೀಡರ್‌ಗಳಲ್ಲಿ (33 ಕವಿ ಪೆಟ್ರೋನೆಟ್ ಸ್ಥಾವರ, 33 ಕೆವಿ ಹೆಚ್.ಪಿ.ಸಿ.ಎಲ್ ಸ್ಥಾವರ, ತೋಟತ್ತಾಡಿ. ಚಿಬಿದ್ರೆ, ನೆರಿಯ, ಚಾರ್ಮಾಡಿ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ಮುಂಡಾಜೆ ಹಾಗೂ ಕಲ್ಮಂಜ ಪ್ರದೇಶಗಳಲ್ಲಿ) ಬೆಳಗ್ಗೆ 10.00ರಿಂದ ಸಾಯಂಕಾಲ 5.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ನಿಲುಗಡೆಯಾಗಿದ್ದು ಗ್ರಾಹಕರು ಸಹಕರಿಸಲು ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.