Site icon Suddi Belthangady

ಉಜಿರೆ ಯೂನಿಯನ್ ಬ್ಯಾಂಕ್ ಶಾಖೆ ವತಿಯಿಂದ ಕಜಕೆ ಸ.ಹಿ.ಪ್ರಾ ಶಾಲೆಗೆ ಕಂಪ್ಯೂಟರ್‌ ವಿತರಣೆ

ಉಜಿರೆ: ಕಜಕೆ ಸ.ಹಿ.ಪ್ರಾ ಶಾಲೆಗೆ ಜು.27ರಂದು ಉಜಿರೆ ಯೂನಿಯನ್ ಬ್ಯಾಂಕ್ ಶಾಖೆಯ ನಿಕಟಪೂರ್ವ ಮ್ಯಾನೇಜರ್ ನಿತಿನ್ ಮತ್ತು ಡಿಜಿಎಂ ಮಹೇಶರವರ ಮಾರ್ಗದರ್ಶನದಲ್ಲಿ ಪ್ರಸ್ತುತ ಉಜಿರೆ ಯೂನಿಯನ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಮಂಜನಾಥ್ ಸಾರಥ್ಯದಲ್ಲಿ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಜಯಾನಂದ ಶೆಟ್ಟಿ ಮತ್ತು ಸಚಿನ್ ಬೀಡೆ, ಸಾಮಾಜಿಕ ಕಾರ್ಯಕರ್ತರು ಇವರು ಸಮ್ಮುಖದಲ್ಲಿ ಶಾಲೆಗೆ ಉಚಿತವಾಗಿ 2 ಕಂಪ್ಯೂಟರ್‌ಗಳನ್ನು ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ್‌ ಗೌಡ ಕಜಕೆಯವರು ಉಪಸ್ಥಿತರಿದ್ದರು.

Exit mobile version