ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ಸ್ ನಲ್ಲಿ 3 ದಿನಗಳ ಕಾಲ ನಡೆದ ಮೀನು ಮೇಳಕ್ಕೆ ಆ.12ರಂದು ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು ಅಭಿನಂದನೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಡಮ್ಮಾಜೆ ಫಾರ್ಮ್ಸ್ ನಾ ಕುಸುಮ ದಿನಕರ ಗೌಡ ಕಡಮ್ಮಾಜೆ , ಸಹೋದರರಾದ ದೇವಿಪ್ರಸಾದ ಗೌಡ, ಜಯಪ್ರಸಾದ ಗೌಡ ಕಡಮ್ಮಾಜೆ, ಬಂದಾರು ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೀತ್ ಸಾವ್ಯ, ಕಾರ್ಯದರ್ಶಿ ಗಿರೀಶ್ ಗೌಡ ಬಿ. ಕೆ. ಬಂದಾರು, ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೆoಕ್ಯಾರ್,ಪಂಚಾಯತ್ ಸದಸ್ಯರಾದ ಶಿವಪ್ರಸಾದ್ ಸುದೆಪ್ಪಿಲ ಹಾಗೂ ವಿವಿಧ ಜವಾಬ್ದಾರಿ ನಿರ್ವಹಿಸಿದ ಸ್ವಯಂ ಸೇವಕರು ಉಪಸ್ಥಿತರಿದ್ದರು.
ಹಲವಾರು ಪ್ರಮುಖರು ಭೇಟಿ ನೀಡಿ ಶುಭಹಾರೈಸಿದರು, ಕೇದುತ್ತ ಮೀನಿನ ಅಟಿಲ್ದ ಕಮ್ಮೆನ ಸವಿದು ಮೆಚ್ಚುಗೆ ಹಂಚಿಕೊಂಡರು. ಮೂರು ದಿನದ ಮೀನು ಮೇಳದಲ್ಲಿ ತಿಲಾಪಿಯ ಮೀನು, ಮಡೆoಜಿ ಮೀನು, ಫoಗಾಸಿಯಸ್ ಮೀನು, ರೂಪ್ ಚಂದ್ ಮೀನುಗಳ ಖಾದ್ಯ ನೀರ್ ದೋಸೆ, ಆಪ, ಊಟ ದೊಂದಿಗೆ ಸವಿಯಲು ಕೆದುತ್ತ ಮೀನ್ ಅಡಿಪಿಲ್ದ ಅಟಿಲ್ ನಲ್ಲಿತ್ತು.ಇದರ ಜೊತೆಗೆ ಮೀನು ಮರಿಗಳು ಲಭ್ಯವಿತ್ತು ಇದರೊಂದಿಗೆ ಎಸ್.ಆರ್.ಕೆ ಮಿಷನರಿ ಲ್ಯಾಡರ್ಸ್, ನೇತ್ರಾವತಿ ನರ್ಸರಿ, ದೇಸಿ ತರಕಾರಿ ಸಸಿ ಮತ್ತು ಬೀಜ, ಟ್ರೀ ಸೈಕ್ಲಿoಗ್, ಜೇನು ಮತ್ತು ಜೀನಿನ ಪರಿಕರಗಳು, ವಿವಿಧ ಅಕ್ವೆರಿಯಂ ಮೀನು ಸಾಮಗ್ರಿ, ಇಕೋ ಫ್ರೆಶ್ ಎಂಟರ್ ಪ್ರೈಸೆಸ್, ಸಚಿನ್ ಸ್ವೀಟ್ಸ್ & ಸ್ವೀಟ್ ಸೆಂಟರ್ ಮಳಿಗೆಗಳು ಒಂದೇ ಸೂರಿನಡಿಯಲ್ಲಿದೆ.
ವಿಶೇಷ ಆಕರ್ಷಣೆಯಾಗಿ ಮೀನಿಗೆ ಗಾಲ ಹಾಕುವ ಸ್ಪರ್ಧೆ, ಮಡೆoಜಿ ಮೀನು ಹಿಡಿಯುವ ಸ್ಪರ್ಧೆ ಜನ ಮನಸೂರೆಗೊಂಡಿತು.ಸಾವಿರಾರು ಜನರು ಭೇಟಿ ನೀಡಿದರು.ವಿಜಯ ಕಡ್ತಿಲ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.