Site icon Suddi Belthangady

ಮಳೆಗೆ ಕೊಚ್ಚಿಹೋದ ಕಿರು ಸೇತುವೆಗೆ ತಾತ್ಕಾಲಿಕ ರಸ್ತೆ ನಿರ್ಮಿಸಿ ಕೊಟ್ಟ ಶಾಸಕ ಹರೀಶ್ ಪೂಂಜ

ಕಲ್ಮಂಜ: ಗುತ್ತುಬೈಲು ಎಂಬಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕಿರು ಸೇತುವೆಯೊಂದು ಸಂಪೂರ್ಣ ಕೊಚ್ಚಿ ಹೋಗಿತ್ತು. ಈ ವಿಷಯವನ್ನು ಮಾನ್ಯ ಶಾಸಕರ ಗಮನಕ್ಕೆ ತಂದಾಗ ಮಳೆ ಕಡಿಮೆಯಾದಲ್ಲಿ ತಾತ್ಕಾಲಿಕವಾಗಿ ಸಂಪರ್ಕ ವ್ಯವಸ್ಥೆ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು.

ಅದರಂತೆ ಕೆಲವು ದಿನದಿಂದ ಮಳೆ ಕಡಿಮೆಯಾದರಿಂದ ತಕ್ಷಣವೇ ತಾತ್ಕಾಲಿಕ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ.ಇದು ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು.ಸರಕಾರದಿಂದ ಯಾವುದೇ ನೆರವು ಬಾರದಿರುವುದರಿಂದ ಕಂಗೆಟ್ಟಿದ್ದ ಕಲ್ಮಂಜ ಗ್ರಾಮಸ್ಥರಿಗೆ ನಿಟ್ಟುಸಿರು ಬಿಡುವಂತಾಗಿದೆ.

Exit mobile version