ಬೈಪಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಬೆಳ್ತಂಗಡಿ ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ ಬೆಳ್ತಂಗಡಿ, ಸರಕಾರಿ ಪ್ರಾಥಮಿಕ ಶಾಲೆ ಪೆರ್ಲ ಬೈಪಾಡಿ, ಸರಕಾರಿ ಪ್ರೌಢ ಶಾಲೆ ಬೈಪಾಡಿ ಇದರ ಸಹಯೋಗದೊಂದಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತ್ತು.
ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ, ಒಕ್ಕೂಟದ ಉಪಾಧ್ಯಕ್ಷ ದಿನೇಶ್, ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ದೇವಿಪ್ರಸಾದ್ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕಿಯಾಗಿ ಆಗಮಿಸಿದ್ದ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ದೇವಿ ಪ್ರಸಾದ್ ಕಾರ್ಯಕ್ರಮದ ಉದ್ದೇಶ, ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗುತ್ತಿದ್ದು ತಮ್ಮ ಜೀವನವನ್ನು ಹಾನಿಗೊಳಪಡಿಸುತ್ತಿದ್ದು ವಿನಾಶದ ಅಂಟಿಗೆ ದಾಪುಗಾಲನ್ನು ಇಡುತ್ತಿದ್ದಾರೆ. ಕುಡಿತ ಧೂಮಪಾನ ಮಾದಕ ದ್ರವ್ಯ ವ್ಯಸನ ಮುಕ್ತರಾಗುವಂತೆ ಕರೆ ನೀಡುವುದರೊಂದಿಗೆ ಕೆಲವು ದೃಷ್ಟಾಂತಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿದ್ಯಾರ್ಥಿಗಳು ಆಧುನಿಕ ಯುಗದ ಕೆಟ್ಟ ಚಾಳಿಗಳಿಗೆ ಬಲಿಯಾಗದಂತೆ ಜಾಗೃತಗೊಳಿಸುವಂತೆ ಮನವರಿಕೆ ಮಾಡಿದರು. ಮೊಬೈಲ್ ಬಳಕೆಯ ಸಾಧಕ ಭಾದಕಗಳನ್ನು ತಿಳಿಸಿದರು ಮುಂದಿನ ಯುವ ಜನಾಂಗವು ದುಶ್ಚಟಗಳಿಗೆ ಬಲಿಯಾಗದಂತೆ ಕಿವಿ ಮಾತನ್ನು ತಿಳಿಸುವುದರೊಂದಿಗೆ ಎಲ್ಲಾ ವಿದ್ಯಾರ್ಥಿಗಳು ಪ್ರತಿಜ್ಞೆಯನ್ನು ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾತಾಡುತ್ತಾ ಡಾ.ಹೆಗ್ಗಡೆಯವರು ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕಾರಣ ಶಾಲಾ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಒಂದು ಉದಾರಣೆಯೊಂದಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷ ದಿನೇಶ್ ಗೌಡ ವಲಯ ಮೇಲ್ವಿಚಾರಕಿ ವನಿತಾ ಉಪಸ್ಥಿತರಿದ್ದರು. ವಿವೇಕಾನಂದ ನಿರೂಪಿಸಿ, ವಿಜಯಕುಮಾರ್ ಸ್ವಾಗತಿಸಿ, ಸೇವಾಪ್ರತಿನಿಧಿ ಪ್ರಮೀಳಾ ವಂದಿಸಿದರು.