Site icon Suddi Belthangady

ಪುದುವೆಟ್ಟು: ಗ್ರಾ.ಪಂ ನ ಪ್ರಥಮ ಸುತ್ತಿನ ಗ್ರಾಮಸಭೆ

ಪುದುವೆಟ್ಟು: ಪುದುವೆಟ್ಟು ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಪುದುವೆಟ್ಟು ಗ್ರಾ.ಪಂ ಅಧ್ಯಕ್ಷೆ ಅನಿತಾ ಕುಮಾರಿರವರ ಅಧ್ಯಕ್ಷತೆಯಲ್ಲಿ ಆ.12ರಂದು ಪುದುವೆಟ್ಟು ಗ್ರಾ.ಪಂ. ಸಭಾಭವನದಲ್ಲಿ ಜರುಗಿತು.

ಮಾರ್ಗದರ್ಶಕ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಹೇಮಚಂದ್ರ ರವರು ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ. ಉಪಾಧ್ಯಕ್ಷ ಪೂರ್ಣಾಕ್ಷ ಬಿ, ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಬನಪ್ಪ ಗೌಡ್ರ ಸ್ವಾಗತಿಸಿ, ಸಿಬ್ಬಂದಿ ಬೇಬಿ ವಾರ್ಡ್ ಸಭೆಯಲ್ಲಿ ಬಂದ ಪ್ರಸ್ತಾವನೆಗಳನ್ನು ಓದಿದರು. ಸಿಬ್ಬಂದಿ ಉಷಾಪ್ರಭ ವರದಿ ವಾಚಿಸಿದರು. ಸಿಬ್ಬಂದಿ ರವಿಶಂಕರ್ ನಿರೂಪಿಸಿದರು.

Exit mobile version