Site icon Suddi Belthangady

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಧರ್ಮಸ್ಥಳ ಶ್ರೀ ಧ.ಮ.ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ನಡೆದ 2024-25ನೇ ಸಾಲಿನ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಧರ್ಮಸ್ಥಳ ಶ್ರೀ ಧ.ಮ.ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಗೆದ್ದಿರುತ್ತಾರೆ.

ಹತ್ತನೇ ತರಗತಿಯ ನಿಹಾಲ್ ಪಿ ದಾಸ್, ಮನ್ವಿತ್ ಮತ್ತು 9ನೇ ತರಗತಿಯ ಧೀಮಂತ ಇವರನ್ನೊಳಗೊಂಡ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಹತ್ತನೇ ತರಗತಿಯ ಚಿನ್ಮಯ್ ರೈ, ಮೌಲ್ಯ ಹಾಗೂ ಎಂಟನೇ ತರಗತಿಯ ಆಧ್ಯ, ದ್ರಿಶಾ ಮರಿಯ ಇವರನ್ನು ಒಳಗೊಂಡ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಬಾಲಕರ ವಿಭಾಗದಲ್ಲಿ ನಿಹಾಲ್ ಪಿ ದಾಸ್ ಅತ್ಯುತ್ತಮ ಆಟಗಾರನಾಗಿ ಆಯ್ಕೆಯಾದರೆ, ಬಾಲಕಿಯರ ವಿಭಾಗದಲ್ಲಿ ಚಿನ್ಮಯಿ ರೈ ಅತ್ಯುತ್ತಮ ಆಟಗಾರ್ತಿಯಾಗಿ ಆಯ್ಕೆಯಾಗಿರುತ್ತಾರೆ.

Exit mobile version