Site icon Suddi Belthangady

ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ – ಒಟ್ಟು ಲಾಭ 92,91,941, ಸದಸ್ಯರಿಗೆ ಡಿವಿಡೆಂಡ್ 14%

ಪಡಂಗಡಿ: ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆ ಆ.11ರಂದು ಸಂಘದ ಸಮೃದ್ಧಿ ಸಭಾಭವನದಲ್ಲಿ ನಡೆಯಿತು.ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್ ವಹಿಸಿ ಸಂಘವು ಒಟ್ಟು ರೂ.92.91ಲಕ್ಷ ಲಾಭ ಗಳಿಸಿದೆ.ಸದಸ್ಯರಿಗೆ 14% ಡಿವಿಡೆಂಡ್ ಘೋಷಿಸಿದರು.

ಮಂಗಳೂರು ಎಸ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರು ಕುಶಾಲಪ್ಪ ಗೌಡ ಪೂವಾಜೆ ರವರು ಸಹಕಾರಿ ಸಂಘ ಉತ್ತಮವಾಗಿ ನಡೆಯಲು ಕೃಷಿಕರು ಅಗತ್ಯ. ನ್ಯಾಶನಲ್ ಬ್ಯಾಂಕ್ ಗಳಿಗೆ ಹೋದರೆ ಅದು ದಾಖಲೆ, ಇದು ದಾಖಲೆ ಎಂದು ಕೃಷಿಕರಿಗೆ ಸುತ್ತಾಡಿಸುತ್ತಾರೆ. ಸಹಕಾರಿಗಳು ಕೃಷಿಕರ ಬೆನ್ನೆಲುಬಾಗಿ ನಿಂತಿದೆ. ಕೇಂದ್ರ ಸರಕಾರ ಕೃಷಿಕರಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ರೂಪಿಸುತ್ತಿದೆ. ಕೃಷಿಕರು ಈ ದೇಶದ ಬೆನ್ನೆಲುಬು. ನಿಮ್ಮ ಸಮಸ್ಯೆಗಳಿಗೆ ಕೇಂದ್ರ ಸಹಕಾರಿ ಬ್ಯಾಂಕ್ ಕೂಡಲೆ ಸ್ಪಂದಿಸಲಿದೆ. ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಕೈ ಹಾಕಿದ ಕೆಲಸ ಚಿನ್ನದಂತೆ ಬೆಳೆಯುತ್ತದೆ. ಈ ಸಂಘವು ಉತ್ತಮ ಸೇವೆ ನೀಡುವಂತಾಗಲಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶಿನಿ ಮತ್ತು ಸಿಬಂದಿಗಳು ಉತ್ತಮ ಸೇವೆ ನೀಡುತ್ತಾ ಬಂದಿದ್ದಾರೆ. ಸದಸ್ಯರೊಟ್ಟಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಿ ಎಂದು ಹೇಳಿದರು.

ಎಸ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕುಶಲಪ್ಪ ಗೌಡ ಪೂವಾಜೆ, ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ, ಸಂಘದ ಮಾಜಿ ಅಧ್ಯಕ್ಷ ಯೋಗೇಶ್ ಕುಮಾರ್ ನಡಕರ, ಸಂತೋಷ್ ಕುಮಾರ್, ಸಂಪತ್ ಕುಮಾರ್ ಕೊಂಬ, ಬೆಳ್ತಂಗಡಿ ಎಸ್ ಡಿ ಸಿ ಸಿ ಬ್ಯಾಂಕ್ ವ್ಯವಸ್ಥಾಪಕ ಸುಧೀರ್ ಕುಮಾರ್, ಪಡಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮೀನಾಕ್ಷಿ, ಪಡಂಗಡಿ ಗ್ರಾಮ ಪಂಚಾಯತ್ ಸದಸ್ಯರು, ಪಡಂಗಡಿ ಹಾಲು ಉತ್ಪದಕರ ಸಹಕಾರ ಸಂಘದ ನಿರ್ದೇಶಕರು ಸದಸ್ಯರು, ಸಂಘದ ಸದಸ್ಯರು, ಸಂಘದ ಉಪಾಧ್ಯಕ್ಷರಾದ ನರೇಂದ್ರ ಕುಮಾರ್, ನಿರ್ದೇಶಕರಾದ ನಾರಾಯಣ ಮೂಲ್ಯ, ಸಂತೋಷ್ ಶೆಟ್ಟಿ, ರವಿ ಕುಮಾರ್, ರಾಮು, ಪದ್ಮನಾಭ ನಾಯ್ಕ, ಕೃಷ್ಣಪ್ಪ ಪೂಜಾರಿ, ಉಮೇಶ್, ಉಷಾ, ಸುನಂದ, ನವೀನ್, ಡಿ ಸಿ ಸಿ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶಿನಿ ಎ. ಮಹಾಸಭೆಯ ನೋಟಿಸ್ ಓದಿ, ವರದಿ ಮಂಡಿಸಿದರು.ನಿರ್ದೇಶಕ ಕೃಷ್ಣಪ್ಪ ಸ್ವಾಗತಿಸಿ ನಿರ್ದೇಶಕ ನಾರಾಯಣ ಮೂಲ್ಯ ವಂದಿಸಿದರು.ಅಂಡಿಂಜೆ ಶಾಲಾ ಶಿಕ್ಷಕ ಶಿವಶಂಕರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಸುಜಯ್, ಉಮೇಶ್, ಆನಂದ, ಸಹಕರಿಸಿದರು. ಗ್ರಾಹಕರಿಗೆ ಅನುಕೂಲವಾಗುವಂತೆ ಜನಸೇವಾ ಕೇಂದ್ರ ಮುಖಾಂತರ ಮೈಕ್ರೋ ಎ. ಟಿ. ಎಂ. ಕೇಂದ್ರ ಎಸ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಬಿಡುಗಡೆಗೊಳಿಸಿದರು. ಸಂಘದ ವತಿಯಿಂದ ನಡೆಸುತ್ತಿರುವ ಕೊಬ್ಬರಿ ಎಣ್ಣೆ ಘಟಕದ ಕೊಬ್ಬರಿ ಎಣ್ಣೆ ಸಾಂಕೇತಿಕವಾಗಿ ವಿತರಿಸಲಾಯಿತು.

ಸಾಧಕರಿಗೆ ಸನ್ಮಾನ: ಎಸ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಕುಶಾಲಪ್ಪ ಗೌಡ ಪೂವಾಜೆ, ಸಾಧಕಿ ವಾಣಿ, ಶಿಕ್ಷಣ ಸಾಧಕ ಅತುಲ್ಕೃಷ್ಣ ಇವರನ್ನು ಸನ್ಮಾನಿಸಲಾಯಿತು.ಪಡಂಗಡಿ ಗ್ರಾಮ ವ್ಯಾಪ್ತಿಯ ಅತೀ ಹೆಚ್ಚು ಅಂಕ ಗಳಿಸಿದ ಶಾಲಾ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು.

Exit mobile version