Site icon Suddi Belthangady

ಶಿರಾಡಿಯ ಗುಂಡ್ಯ ಬಳಿ ಕಾರಿನ ಮೇಲೆ ಬಿದ್ದ ಕಂಟೈನರ್ ಲಾರಿ- ಕಾರು ಸಂಪೂರ್ಣ ನಜ್ಜುಗುಜ್ಜು- ಕಾರಿನಲ್ಲಿದ್ದವರು ಒಂದು ನಿಮಿಷದ ಮೊದಲಷ್ಟೇ ಇಳಿದಿದ್ದರಿಂದ ಬಚಾವ್

ಗುಂಡ್ಯ: ಇಲ್ಲಿನ ಬರ್ಸಿನಹಳ್ಳ ಸಮೀಪ ಕೊರಿಯರ್ ತುಂಬಿರುವ ಕಂಟೈನರ್ ಕಾರೊಂದರ ಮೇಲೆ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಗಾಗಿರುವ ಘಟನೆ ನಡೆದಿದೆ.‌ದಾವಣಗೆರೆ ಮೂಲದ ಯಾತ್ರಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ವಾಪಾಸಾಗುವ ವೇಳೆ ಘಟನೆ ನಡೆದಿದೆ.

ಕಂಟೈನರ್ ಮಗುಚಿ ಬೀಳುವ ಒಂದು ನಿಮಿಷದ ಮೊದಲು ಕಾರಿನ ಡ್ರೈವರ್ ಕಾರು ನಿಲ್ಲಿಸಿ ಪಕ್ಕದಲ್ಲೇ ಹರಿಯುವ ನೀರಿನಲ್ಲಿ ಮುಖ ತೊಳೆಯಲೆಂದು ಇಳಿದಿದ್ದು, ಈ ವೇಳೆ ಕಾರಿನಲ್ಲಿದ್ದ ನಾಲ್ವರು ಕೂಡ ಇಳಿದಿದ್ದರು. ಈ ವೇಳೆ ಚಲಿಸುತ್ತಿದ್ದ ಮಹಾರಾಷ್ಟ್ರ ಮೂಲದ ಕಂಟೈನರ್ ಕಾರಿನ ಮೇಲೆ ಮಗುಚಿ ಬಿದ್ದಿದೆ.

ಕಾರಿನಲ್ಲಿ ಯಾರೂ ಇಲ್ಲದ ಕಾರಣ ಎಲ್ಲವೂ ಬಚಾವ್ ಆಗಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಟ್ರಾಫಿಕ್ ಸಂಚಾರಿ ವಾಹನ ಕಂಟೈನರ್ ತರಿಸಿ ಸ್ಥಳದಿಂದ ವಾಹನಗಳನ್ನು ತೆರವುಗೊಳಿಸಿದ್ದಾರೆ. ಕಾರಿನಲ್ಲಿದ್ದವರು ನಮ್ಮನ್ನು ದೇವರೇ ಕಾಪಾಡಿದೆಂದು ಕಾರ್ಯಾಚರಣೆ ವೇಳೆ ಹೇಳುತ್ತಿದ್ದರು. ಕಾರಿನಲ್ಲಿದ್ದವರ ಸಂಪೂರ್ಣ ಮಾಹಿತಿ ಹೊರಬರಬೇಕಿದೆ.

Exit mobile version