ನಾಳ: ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಾಗರ ಪಂಚಮಿಯನ್ನು ಸಡಗರದಿಂದ ಆಚರಿಸಲಾಯಿತು.
ಮುಂಜಾನೆ ಕ್ಷೇತ್ರದ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆದ ಬಳಿಕ ಕ್ಷೇತ್ರದ ಒಳಗಿರುವ ನಾಗನ ಮೂಲ ಸನ್ನಧಿ( ಹುತ್ತಕ್ಕೆ) ಕ್ಷೀರಾಭಿಷೇಕ ನೆರವೇರಿಸಿ, ತಂಬಿಲಸೇವೆ, ಪೂಜೆ ನಡೆಸಲಾಯಿತು.
ಕ್ಷೇತ್ರದ ನಾಗನಕಟ್ಟೆಯಲ್ಲಿ ಕ್ಷೀರಾಭಿಷೇಕ, ತಂಬಿಲ ಸೇವೆ, ವಿಶೇಷ ಪೂಜೆ ನಡೆಯಿತು.
ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ದೇವಸ್ಥಾನದ ಪ್ರಬಂಧಕ ಗಿರೀಶ್ ಶೆಡ್ಟಿ, ಅಭಿವದ್ದಿ ಸಮಿತಿ ಅಧ್ಯಕ್ಷ ಯಾದವ ಗೌಡ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಶ್ರೀ ದುರ್ಗಾ ಮಾತೃಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್, ವ್ಯವಸ್ಥಾಪನ ಸಮತಿ ಮಾಜಿ ಅಧ್ಯಕ್ಷ ವಸಂತ ಮಜಲು, ಭುವನೇಶ್ ಗೇರುಕಟ್ಟೆ, ಮಾಜಿ ಸದಸ್ಯರಾದ ಅಂಬಾ ಆಳ್ವ, ದಿನೇಶ್ ಗೌಡ, ರಾಜೇಶ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.