Site icon Suddi Belthangady

ಮಳೆಹಾನಿ ಪ್ರದೇಶದಲ್ಲಿ ಕೇಂದ್ರ ತಂಡದಿಂದ ಪರಿಶೀಲನೆ

ಬೆಳ್ತಂಗಡಿ: ವಿಪರೀತ ಮಳೆಯಿಂದ ಭೂ ಕುಸಿತವಾಗಿ ಹಾನಿಯಾದ ಬೆಳ್ತಂಗಡಿ ತಾಲೂಕಿನ ಮೂರು ಪ್ರದೇಶಕ್ಕೆ ಕೇಂದ್ರ ಸರಕಾರದ ಎರಡು ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ನಗರದ ಕಲ್ಲಗುಡ್ಡೆ ಟೀ ಪಾರ್ಕ್ ಬಳಿಯ ಭೂಕುಸಿತ, ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಬದಿನಡೆ ಬಳಿಯ ಮನೆ ಹಾನಿ ಹಾಗೂ ಭೂಕುಸಿತ ಪ್ರದೇಶ, ಸವಣಾಲು ಗ್ರಾಮದ ಪಿಲಿಕಲ ರಸ್ತೆ ಭೂಕುಸಿತವಾದ ಪ್ರದೇಶಕ್ಕೆ ಕೇಂದ್ರ ಸರಕಾರದ NDRF ತಂಡ ಮತ್ತು GSI ತಂಡ ಆ.8 ರಂದು ಸಂಜೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕೇಂದ್ರ ಸರಕಾರದ ಬೆಂಗಳೂರು ಕ್ಯಾಪ್ ನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಇನ್ಸೆಕ್ಟ‌ರ್ ಶಾಂತಿ ಲಾಲು ಮತ್ತು ತಂಡದ ಸಿಬ್ಬಂದಿ ಹಾಗೂ GSI (geological serve of india) ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಬ್ಬರು ಅಧಿಕಾರಿಗಳು ಜಂಟಿಯಾಗಿ ಆ. 8 ರಂದು ಸಂಜೆ ಬೆಳ್ತಂಗಡಿಯ ಮೂರು ಪ್ರದೇಶಗಳಿಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಕಂದಾಯ ಇನ್ಸೆಕ್ಟರ್ ಪ್ರತೀಷ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿ ಮಾಹಿತಿ ಕಲೆ ಹಾಕಿ ತೆರಳಿದ್ದಾರೆ.

Exit mobile version