ಬೆಳ್ತಂಗಡಿ: ಹೆದ್ದಾರಿ ಕಾಮಗಾರಿಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಕಾಶಿ ಬೆಟ್ಟು ಇಂಡಸ್ಟ್ರಿಯಲ್ ಎಸ್ಟೇಟ್ ನ ಉದ್ಯಮಿಗಳು ಶುಕ್ರವಾರ ಬೆಳಗ್ಗಿನಿಂದ ಕಾಶಿ ಬೆಟ್ಟುನಲ್ಲಿ ಅಗೆದು ಹಾಕಿರುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕುಳಿತು ಪ್ರತಿಭಟನೆಯನ್ನು ಮಾಡಿದ್ದರು.
ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಾಗುತ್ತದೆ ಎಂದು ಹೆಚ್ಚಾಗಿ ಖುಷಿಪಟ್ಟವರು ನಾವು, ಬೆಳ್ತಂಗಡಿ ತಾಲೂಕಿನ ಏಕೈಕ ಕೈಗಾರಿಕಾ ಪ್ರದೇಶ ಕಾಶಿಬೆಟ್ಟು, ನಾವು ಸಾಕಷ್ಟು ತಾಳ್ಮೆಯಿಂದ ಇದ್ದೇವು, ನಮಗೆ ಸರಿಯಾದ ರಸ್ತೆಯ ವ್ಯವಸ್ಥೆ ಮಾಡಿ ಕೊಡುತ್ತಾರೆ, ಸಂಪರ್ಕ ರಸ್ತೆ ಮಾಡಿಕೊಡುತ್ತಾರೆ ಎಂದು ಮೂರು ನಾಲ್ಕು ತಿಂಗಳು ನೊಡಿದೇವು ಆದರೆ ಅಧಿಕಾರಿಗಳು ಮೌಖಿಕವಾಗಿ ಹೇಳಿರುವಂತದು.
ಆದರೆ ಯಾರ ಒಬ್ಬರದು ಇಲ್ಲಿಯವರೆಗೆ ಪ್ರತಿಕ್ರಿಯೆ ಇಲ್ಲ, ಹಾಗಾಗಿ ರಾಷ್ಟ್ರೀಯ ಪ್ರಾಧಿಕಾರಕ್ಕೆ ನಮಗೆ ಸಮರ್ಪಕವಾದ ರಸ್ತೆ ಸಂಪರ್ಕ ಮಾಡಿ ಕೊಡಬೇಕು ಎಂದು ಮನವಿ ಮಾಡಿದ್ದೇವು. ಆದರೆ ಅವರು ಇಲ್ಲಿಯವರೆಗೆ ಸ್ಥಳ ಪರಿಶೀಲನೆ ಮಾಡಲಿಲ್ಲ. ಡಿ.ಪಿ ಜೈನ್ ಕಂಪನಿಯವರಿಗೆ ಹೇಳಿದರು ಕೂಡ ಅವರಿಂದ ನಿರಾಸೆ ಉತ್ತರ ಬಂದ ಕಾರಣ ನಾವು ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ನಮಗೆ ಪರಿಹಾರ ಸಿಗದಿದ್ದರೆ ಮುಂದಕ್ಕೆ ದೊಡ್ಡದಾದ ಪ್ರತಿಭಟನೆ ಮಾಡುತ್ತೇವೆ ಎಂದು ಕೈಗಾರಿಕೆ ಅಭಿವೃದ್ಧಿ ನಿಗಮದ ಸಮಿತಿಯ ಅಧ್ಯಕ್ಷ ರಾದ ಪ್ರಶಾಂತ್ ಲಾಯಿಲ ಹೇಳಿದರು.
ನಂತರ ಪ್ರತಿಭಟನೆ ಸ್ಥಳಕ್ಕೆ ಭೇಟಿ ಕೊಟ್ಟ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಒಳಚರಂಡಿ ಹಾಗೂ ಸ್ಟ್ರೀಟ್ ಲೈಟ್ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಲಾಯಿಲ ಗ್ರಾಮ ಪಂಚಾಯತ್ ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶೇಖರ್ ಲಾಯಿಲ, ಲಾಯಿಲ ಗ್ರಾಮ ಪಂಚಾಯತ್ ಸದಸ್ಯೆ ಆಶಾಲತಾ, ಸ್ಥಳೀಯರಾದ ಮುಸ್ತಾಫ್, ವೆಂಕಟರಮಣ ಭಟ್, ರಾಧಾಕೃಷ್ಣ ಶೆಟ್ಟಿ, ಪದ್ಮನಾಭ, ಹನೀಫ್ ಉಪಸ್ಥಿತರಿದ್ದರು.