Site icon Suddi Belthangady

ಕಸ್ತೂರಿ ರಂಗನ್ ವರದಿ ಮತ್ತೆ ಕರಡು ವಿಜ್ಞಾಪನೆ: ಜನರ ಆತಂಕ ಪರಿಹರಿಸುವಂತೆ ಕೆ.ಎಸ್.ಎಂ.ಸಿ.ಎ ನೆಲ್ಯಾಡಿ ಘಟಕದಿಂದ ಆಗ್ರಹ

ನೆಲ್ಯಾಡಿ: ಮಲೆನಾಡು ಜನರ ಬದುಕನ್ನು ಕಗ್ಗತ್ತಲೆಗೆ ನೂಕುವ ಕಸ್ತೂರಿ ರಂಗನ್ ವರದಿ ಮತ್ತೆ ಐದನೇ ಕರಡು ವಿಜ್ಞಾಪನೆಯ ರೂಪದಲ್ಲಿ ಹೊರಬಂದಿದ್ದು, ವರದಿಯಲ್ಲಿ ಅಡಕವಾಗಿರುವ ಗ್ರಾಮಗಳ ಜನರಲ್ಲಿ ಭಯ ಮತ್ತು ಆತಂಕ ಹೆಚ್ಚಿಸಿದೆ. ಕೇಂದ್ರ ಮತ್ತು ರಾಜ್ಯಗಳ ಚುನಾಯಿತ ಪ್ರತಿನಿಧಿಗಳು ಜನರ ಆತಂಕವನ್ನು ಪರಿಹರಿಸಲು ತಕ್ಷಣ ಪ್ರಯತ್ನಿಸಲು ಕೆ.ಎಸ್.ಎಂ.ಸಿ.ಎ (ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್) ನೆಲ್ಯಾಡಿ ಘಟಕ ಆಗ್ರಹಿಸಿದೆ.

ಪ್ರಾಕೃತಿಕ ವಿಕೋಪಗಳಿಗೆ ಹೊಣೆಗಾರಿಕೆಯನ್ನು ರೈತರ ಮೇಲೆ ಹಾಕುವುದು ಅತ್ಯಂತ ಖಂಡನೀಯ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ವಯನಾಡು ಭೂಕುಸಿತದ ಮೂಲ ಕಾರಣಗಳು ಜನವಸತಿ ಮತ್ತು ಕೃಷಿ ಇಲ್ಲದ ದಟ್ಟಾರಣ್ಯ ಪ್ರದೇಶಗಳಾಗಿವೆ. ವಯನಾಡು ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ರೈತರ ಕಾಳಜಿ ಮತ್ತು ಆತಂಕಗಳಿಗೆ ಪರಿಹಾರ ಕಂಡುಹಿಡಿಯದೆ, ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಲು ಹೊರಟಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ನೆಲ್ಯಾಡಿ ಸಂತ ಅಲ್ಫೋನ್ಸ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಂದನಿಯ ಫಾ.ಶಾಜಿ ಮಾತ್ಯು, ಪದಾಧಿಕಾರಿಗಳಾದ ಶಿಬು, ರಂಜನ್, ಬಿನಿಶ್, ಮಿನಿ, ಜಯೇಶ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಪಕ್ಷ ಭೇದ ಮರೆತು ಜನಪ್ರತಿನಿಧಿಗಳು ಜನರ ಆತಂಕವನ್ನು ಸರಕಾರದ ಮುಂದಿಟ್ಟು ಶಾಶ್ವತ ಪರಿಹಾರ ಕಂಡುಹಿಡಿಯಲು ಒತ್ತಾಯಿಸಿದರು.

Exit mobile version