ಬೆಳ್ತಂಗಡಿ: ಇಲ್ಲಿನ ಆವಾಸೀಯ ವಿದ್ಯಾಲಯ ಸೋರುತ್ತಿದೆ, ವಸತಿ ಶಾಲೆಯಾಗಿರುವುದರಿಂದ ಮಕ್ಕಳು ತೊಂದರೆ ಅನುಭವಿಸ್ತಾ ಇದ್ದಾರೆ, ಹಾಸ್ಟೆಲ್ ನ ಮಕ್ಕಳೇ ತಮ್ಮ ನೋವು ತೋಡಿಕೊಂಡಿರುವ ಸುದ್ದಿ ವರದಿ ನೋಡಿ ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಲಾಯಿಲ ವಸತಿ ಶಾಲೆಗೆ ಭೇಟಿ ನೀಡಿದರು.
ಈ ವೇಳೆ ಶಾಲಾ ಮುಖ್ಯೋಪಾದ್ಯಾಯರು ಶಾಲೆಯನ್ನು ವೀಕ್ಷಿಸಲು ಅಧಿಕಾರಿಗಳ ಅನುಮತಿ ಕೇಳುವಂತೆ ವಿನಂತಿಸಿಕೊಂಡರು. ಈ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಕರೆ ಮಾಡಿದಾಗ ಅವರು ಅನುಮತಿ ನಿರಾಕರಿಸಿ, ಡಿಡಿಪಿಐಯವರಲ್ಲಿ ಕೇಳಬೇಕೆಂದು ತಿಳಿಸಿದರು.ನಂತರ ಡಿಡಿಪಿಐಯವರು ಮೊದಲ ಕರೆ ಸ್ವೀಕರಿಸಿ ಮಾತನಾಡಿ, ನಂತರ ಕರೆಯನ್ನೇ ಸ್ವೀಕರಿಸಲಿಲ್ಲ.
ನಂತರ ಶಾಲೆಯ ಪರಿಸ್ಥಿತಿಯನ್ನು ವೀಕ್ಷಿಸಿ ಸಂತೋಷ್ ಮಕ್ಕಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇಲ್ಲದೇ ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಅಲ್ಲದೇ ಕೆಡಿಪಿ ಸದಸ್ಯನಿಗೆ ಅನುಮತಿ ನಿರಾಕರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.