ಬೆಳ್ತಂಗಡಿ: ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವಿ.ಹೆಗ್ಗಡೆಯವರು ತಾಲೂಕಿನಲ್ಲಿ ಮಾಶಾಸನ ಪಡೆಯುತ್ತಿರುವ ವಾತ್ಸಲ್ಯ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಾತ್ಸಲ್ಯ ನಿಧಿ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಯೋಜನಾ ವ್ಯಾಪ್ತಿಯ 19 ವಾತ್ಸಲ್ಯ ಸದಸ್ಯರ 27 ಮಂದಿ ಮಕ್ಕಳಿಗೆ 22000ರ ಮೌಲ್ಯದ ಶಾಲಾ ಪುಸ್ತಕ,ಬ್ಯಾಗ್,ಛತ್ರಿ,ಬಟ್ಟೆ ಶಾಲಾ ಶುಲ್ಕವನ್ನು ಒದಗಿಸಿದ್ದು ಇದನ್ನು ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ರವೆಉ ವಾಸ್ತಲ್ಯ ಸದಸ್ಯರ ಮನೆಭೇಟಿ ಮಾಡಿ ವಿತರಿಸಿದರು.
ಈ ಸಂದರ್ಭದಲ್ಲಿ ಜ್ಞಾನವಿಕಾಸ ಸಮನ್ವಯಧಿಕಾರಿ ಮಧುರಾ ವಸಂತ್, ಮೇಲ್ವಿಚಾರಕ ಸುಶಾಂತ್, ರವೀಂದ್ರ ಆಚಾರ್ಯ ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.