Site icon Suddi Belthangady

ಬದನಾಜೆ: ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ ಬೆಳ್ತಂಗಡಿ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬದನಾಜೆ ಇದರ ಸಹಯೋಗದೊಂದಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು.

ಒಕ್ಕೂಟದ ಅಧ್ಯಕ್ಷ ಬಾಬು ನಾಯ್ಕ್ , ಉಮ್ಮರಬ್ಬ, ಶಾಲಾ ಮುಖ್ಯ ಶಿಕ್ಷಕಿ ಜಮುನಾ ಕೆ. ಎಸ್., ಒಕ್ಕೂಟದ ಮತ್ತು ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ದೇವಿಪ್ರಸಾದ್ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕಿಯಾಗಿ ಆಗಮಿಸಿದ ಜನಜಾಗೃತಿ ವೇದಿಕೆಯ ಶಿಬಿರಾಧಕಾರಿ ದೇವಿ ಪ್ರಸಾದ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗುತ್ತಿದ್ದು ತಮ್ಮ ಜೀವನವನ್ನು ಹಾನಿಗೊಳ ಪಡಿಸುತ್ತಿದ್ದು, ವಿನಾಶದ ಅಂಟಿಗೆ ದಾಪುಗಾಲನ್ನು ಇಡುತ್ತಿದ್ದಾರೆ ಕುಡಿತ ಧೂಮಪಾನ ಮಾದಕ ದ್ರವ್ಯ ವ್ಯಸನ ಮುಕ್ತರಾಗುವಂತೆ ಕರೆ ನೀಡುವುದರೊಂದಿಗೆ ಕೆಲವು ದೃಷ್ಟಾಂತಗಳನ್ನು ವಿದ್ಯಾರ್ಥಿಗಳಿಗೆ ನೈಜ ಘಟನೆ ಬಗ್ಗೆ ಉದಾರಣೆಯೊಂದಿಗೆ ತಿಳಿಸಿದರು.

ವಿದ್ಯಾರ್ಥಿಗಳು ಆಧುನಿಕ ಯುಗದ ಕೆಟ್ಟ ಚಾಳಿಗಳಿಗೆ ಬಲಿಯಾಗದಂತೆ ಜಾಗೃತಗೊಳಿಸುವಂತೆ ಮನವರಿಕೆ ಮಾಡಿದರು.

Exit mobile version