Site icon Suddi Belthangady

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ- ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ

ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕರಾಟೆ ಸ್ಪರ್ಧೆಯು ಆಗಸ್ಟ್ 5ರಂದು ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ನಡೆಯಿತು.

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆದಿದ್ದಾರೆ. 14 ವಯೋಮಾನದ ಕೆಳಗಿನ ವಿಭಾಗದಲ್ಲಿ ಶಮಂತ್ (8ನೇ) ದ್ವಿತೀಯ ಸ್ಥಾನ, ಸೋನಲ್ ಡಿ’ಸೋಜ (7ನೇ) ತೃತೀಯ ಸ್ಥಾನ ಹಾಗೂ 17 ವಯೋಮಾನದ ಕೆಳಗಿನ ವಿಭಾಗದಲ್ಲಿ ಭುವಿ (8ನೇ) ತೃತೀಯ ಸ್ಥಾನ ಹಾಗೂ ಮಾನ್ವಿ (8ನೇ) ತೃತೀಯ ಸ್ಥಾನ ಪಡೆದಿದ್ದಾರೆ.

ಕರಾಟೆ ಶಿಕ್ಷಕ ಅಶೋಕ್ ಆಚಾರ್ಯ ತರಬೇತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ವಂ.ಫಾ ಕ್ಲಿಫರ್ಡ್ ಪಿಂಟೋರವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Exit mobile version