Site icon Suddi Belthangady

ಸ್ನೇಹ ಸಿಲ್ಕ್‌ನಲ್ಲಿದೆ ಗ್ರಾಹಕ ಸ್ನೇಹಿ ದರ…!- ಆಷಾಢ (ಆಟಿ) ಸೇಲ್‌ನಲ್ಲಿ ಗ್ರಾಹಕರಿಗಿದೆ ಭರ್ಜರಿ ಡಿಸ್ಕೌಂಟ್- ಬ್ರಾಂಡೆಡ್ ಕಂಪನಿಯ ಡ್ರೆಸ್ ಗಳಿಗೂ ಡಿಸ್ಕೌಂಟ್- ನವನವೀನ ಮಾದರಿಯ ಹೊಸ ಹೊಸ ಸಂಗ್ರಹ- ಅತೀ ಕಡಿಮೆ ದರ ವಿಶಾಲ ಮಳಿಗೆ ವಿಪುಲ ಆಯ್ಕೆ

ಪುತ್ತೂರು: ನೀವು ಡ್ರೆಸ್ ಖರೀದಿಸಬೇಕೆಂದಿದ್ದೀರಾ…? ಹಾಗಾದರೆ ಒಮ್ಮೆ ಬೊಳುವಾರಿನ ಸ್ನೇಹ ಸಿಲ್ಕ್ಸ್‌ರೆಡಿಮೇಡ್ಸ್‌ಗೆ ಬನ್ನಿ…! ಆಷಾಡ ಮಾಸದ ಭರ್ಜರಿ ಡಿಸ್ಕೌಂಟ್ ಸೇಲ್ ಪ್ರಾರಂಭಗೊಂಡಿದ್ದು, ಇಲ್ಲಿ ಗ್ರಾಹಕರನ್ನು ಮನಸೂರೆಗೊಳಿಸುವ ವಿವಿಧ ವೆರಾಟಿ, ವಿನ್ಯಾಸದ ಉಡುಪುಗಳು ಅತೀ ಕಡಿಮೆ ದರದಲ್ಲಿ ದೊರೆಯಲಿದೆ.

ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿಯಲ್ಲಿರುವ ಸ್ನೇಹ ಸಿಲ್ಕ್ಸ್ ರೆಡೆಮೇಡ್ಸ್ ಉಡುಪುಗಳ ಖರೀದಿಗೆ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಷಾಢ ಮಾಸದ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಪ್ರಾರಂಭಿಸಿದ್ದು ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳ ಖರೀದಿಗೆ ಇದು ಸಕಾಲವಾಗಿದೆ. ಮಕ್ಕಳು, ಮಹಿಳೆಯರು ಹಾಗೂ ಪುರುಷರ ಎಲ್ಲಾ ರೀತಿಯ ಉಡುಪುಗಳ ಖರೀದಿಗೆ ವಿಶೇಷ ರಿಯಾಯಿತಿಯಿದೆ. ಪುರುಷರ ಹೊಸ ಹೊಸ ವಿನ್ಯಾಸದ ಶರ್ಟ್‌ಗಳು ಹೊಲಿಗೆಯ ದರಕ್ಕಿಂತಲೂ ಕಡಿಮೆ ದರದಲ್ಲಿ ಲಭ್ಯವಿದೆ. ಫ್ಯಾನ್ಸಿ ಸಾರಿಗಳು ಕೇವಲ ರೂ.125ರ ದರದಲ್ಲಿ ನಿಮ್ಮ ಕೈಸೇರಲಿದೆ. ಆಷಾಡ ವಿಶೇಷ ರಿಯಾಯಿತಿ ದರದಲ್ಲಿ ಮಳಿಗೆಯಲ್ಲಿರುವ ಎಲ್ಲಾ ರೀತಿಯ ಉಡುಪುಗಳನ್ನು ಖರೀದಿಸಬಹುದಾಗಿದ್ದು ಜಾಕಿ, ವಿಐಪಿ, ರಾಮ್‌ರಾಜ್, ವ್ಯಾನಿಸನ್, ಟೈಬರ್ ಮೊದಲಾದ ಹೆಸರಾಂತ ಕಂಪನಿಗಳ ಉಡುಪುಗಳೂ ವಿಶೇಷ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯ. ಎಲ್ಲಾ ತರದ ಉಡುಪುಗಳಲ್ಲಿ ಪ್ರತಿ ದಿನ ಹೊಸ ಹೊಸ ಸಂಗ್ರಹಗಳಿದೆ. ಹೀಗಾಗಿ ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳ ಖರೀದಿಗೆ ವಿಪುಲ ಅವಕಾಶವಿದೆ.

ಭರ್ಜರಿ ಡಿಸ್ಕೌಂಟ್…!: ಬ್ರಾಂಡೆಡ್ ಸಹಿತ ಎಲ್ಲಾ ಉಡುಪುಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದ್ದು ಅತೀ ಕಡಿಮೆ ದರದಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ರೂ.100ರಿಂದ 245ದರದಲ್ಲಿ ಟೀ-ಶರ್ಟ್‌ಗಳು, ರೂ.199ಕ್ಕೆ ಕ್ಯಾಜುವಲ್ ಶರ್ಟ್‌ಗಳು, ರೂ.250ಕ್ಕೆ ಪ್ರಿಂಟ್ ಹಾಗೂ ಇನ್ನಿತರ ಪಾರ್ಮಲ್ ಶರ್ಟ್‌ಗಳು, ರೂ.100ಕ್ಕೆ ತ್ರಿಫೋರ್ತ್ ಚಡ್ಡಿ, ರೂ.100ಕ್ಕೆ ಬರ್ಮುಡ ಚಡ್ಡಿ, ರೂ.85ಕ್ಕೆ ಸ್ಪೋರ್ಟ್ಸ್ ಚಡ್ಡಿಗಳು, ರೂ.100ಕ್ಕೆ ಎರಡು ಬಾತ್ ಟವೆಲ್, ಸೀರೆಗಳು ರೂ.125 ದರದಲ್ಲಿ ಪ್ರಾರಂಭಗೊಳ್ಳಲಿದೆ. ರೂ.195ಕ್ಕೆ ಫ್ಯಾನ್ಸಿ ಕಾಟನ್ ಸೀರೆಗಳು, ರೂ.150ಕ್ಕೆ ರವಿಕೆ ಸಹಿತ ಸೀರೆಗಳು, ರೂ.125ಕ್ಕೆ ನೈಟಿಗಳು, ರೂ.100ಕ್ಕೆ ಸ್ಲಿಪ್, ರೂ.100ಕ್ಕೆ ಎರಡು ಪ್ಯಾಂಟೀಸ್, ರೂ.100ಕ್ಕೆ ಲೆಗ್ಗಿನ್ಸ್, ರೂ.150ಕ್ಕೆ ಕುರ್ತಿಸ್ ಸೇರಿದಂತೆ ಎಲ್ಲಾ ರೀತಿಯ ಮಕ್ಕಳ ಉಡುಪುಗಳನ್ನು ಅತೀ ಕಡಿಮೆ ದರದಲ್ಲಿ ಖರೀದಿಸಬಹುದಾದ ಸದಾವಕಾಶವಿದೆ.

ವಿಶಾಲ ಮಳಿಗೆ, ವಿಪುಲ ಆಯ್ಕೆ: ಜವುಳಿ ಉದ್ಯಮದಲ್ಲಿ ಸುದೀರ್ಘ ವರ್ಷಗಳ ಅನುಭವಗಳೊಂದಿಗೆ ಬೊಳುವಾರಿನಲ್ಲಿ ಪ್ರಾರಂಭಗೊಂಡಿರುವ ಸ್ನೇಹಾ ಸಿಲ್ಕ್ಸ್‌ರೆಡಿಮೇಡ್ಸ್ ಮಳಿಗೆಯು ಗ್ರಾಹಕರ ಮನಗೆದ್ದಿದೆ. ಮೂರು ಅಂತಸ್ತಿನ ವಿಶಾಲ ಮಳಿಗೆಯು ಸಂಪೂರ್ಣ ಹವಾನಿಯಂತ್ರಿತ ಮಳಿಗೆಯಾಗಿದೆ. ನೆಲಮಹಡಿಯಲ್ಲಿ ಮಕ್ಕಳ ಉಡುಪುಗಳು, ಪ್ರಥಮ ಮಹಡಿಯಲ್ಲಿ ಸೀರೆಗಳು, ಮದುವೆಯ ಉಡುಪುಗಳು ಸೇರಿದಂತೆ ಮಹಿಳೆಯರ ಎಲ್ಲಾ ರೀತಿಯ ಉಡುಪುಗಳು, ಎರಡನೇ ಮಹಡಿಯಲ್ಲಿ ಪುರುಷರ ಎಲ್ಲಾ ರೀತಿಯ ಉಡುಪುಗಳ ಪ್ರತ್ಯೇಕ ಪ್ರತ್ಯೇಕ ವಿಭಾಗಗಳನ್ನು ಹೊಂದಿರುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ವಿಶಾಲ ವಾಹನ ಪಾರ್ಕಿಂಗ್ ಹಾಗೂ ಲಿಫ್ಟ್ ಸೌಲಭ್ಯಗಳನ್ನು ಒಳಗೊಂಡಿದೆ.

ಕ್ಲಿಯರೆನ್ಸ್ ಅಲ್ಲ… ಹೊಸ ಸಂಗ್ರಹ: ಆಷಾಢ ಮಾಸದ ವಿಶೇಷ ರಿಯಾಯಿತಿ ದರದ ಮಾರಾಟದಲ್ಲಿ ಪ್ರತಿದಿನ ಹೊಸ ಹೊಸ ಜವುಳಿಗಳ ಸಂಗ್ರಹವಿದೆ. ಎಲ್ಲಾ ರೀತಿಯ ಉಡುಪುಗಳು ಉನ್ನತ ಗುಣಮಟ್ಟಗಳಿಂದ ಕೂಡಿದೆ. ಆಷಾಡ ಡಿಸ್ಕೌಂಟ್ ಸೇಲ್ ಯಾವುದೇ ಕಾರಣಕ್ಕೂ ಕ್ಲಿಯರೆನ್ಸ್ ಸೇಲ್ ಅಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Exit mobile version