Site icon Suddi Belthangady

ರಾಷ್ಟ್ರೀಯ ಬೀಚ್ ಕಬ್ಬಡಿ ರಾಜ್ಯ ಮಹಿಳಾ ತಂಡದ ನಾಯಕಿಯಾಗಿ ಉಜಿರೆ ಕಾಲೇಜು ವಿದ್ಯಾರ್ಥಿನಿ ಸುಮಯ್ಯ, ಪುರುಷರ ತಂಡದ ಆಟಗಾರನಾಗಿ ಚೇತನ್ ಆಯ್ಕೆ

ಉಜಿರೆ: ಆಗಸ್ಟ್ 8 ರಿಂದ 11ರ ತನಕ ಬಿಹಾರದ ಭೋದ ಗಯಾದಲ್ಲಿ ನಡೆಯುವ ರಾಷ್ಟ್ರೀಯ ಬೀಚ್ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ತಂಡದ ಮಹಿಳೆಯರ ನಾಯಕಿಯಾಗಿ ಉಜಿರೆ ಎಸ್ ಡಿ ಎಂ ಕಾಲೇಜಿನ ಕಬಡ್ಡಿ ಆಟಗಾರ್ತಿ ಸುಮಯ್ಯ ಇವರು ಆಯ್ಕೆಯಾಗಿದ್ದಾರೆ.

ಅದೇ ರೀತಿ ಪುರುಷರ ಕಬಡ್ಡಿ ತಂಡಕ್ಕೆ ಎಸ್‌ಡಿಎಂ ಕಾಲೇಜಿನ ಕಬಡ್ಡಿ ಆಟಗಾರರಾದ ಚೇತನ್ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಇವರಿಗೆ ಎಸ್ ಡಿ ಎಂ ಕಬಡ್ಡಿ ತಂಡದ ತರಬೇತಿಯ ಕೃಷ್ಣಾನಂದ ತರಬೇತಿ ದಾರರಾಗಿದ್ದಾರೆ ಹಾಗೂ ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್ಬಿನ ಕಾರ್ಯದರ್ಶಿ ರಮೇಶ್ ಇವರ ಮಾರ್ಗದರ್ಶನ ಹಾಗೂ ಎಲ್ಲಾ ತರಬೇತಿದಾರರು ಪ್ರೋತ್ಸಾಹ ನೀಡಿದ್ದಾರೆ.

Exit mobile version