Site icon Suddi Belthangady

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ನಡೆದ 17ರ ಕೆಳಗಿನ ವಯೋಮಾನದವರ ಕರಾಟೆ ಸ್ಪರ್ಧೆಯಲ್ಲಿ ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅನುಷಾ ಫೆರ್ನಾಂಡೀಸ್, ದೀಪ ಸ್ವೀಡೆಲ್, ನಿಕಿತಾ ಡಿ’ಸೋಜ, ವೈಭವ್ ಹೆಗ್ಡೆ ಹಾಗೂ 14ರ ಕೆಳಗಿನ ವಯೋಮಾನದವರಲ್ಲಿ ತನ್ವಿ ಎಸ್ ಮತ್ತು ಪ್ರೇಕ್ಷಿತ್ ಇವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಿಶನ್ ಮತ್ತು ಸೃಜನ್ ದ್ವಿತೀಯ ಸ್ಥಾನ ಹಾಗೂ ಡಿಯೋನ್ ಪ್ರಿನ್ಸ್, ರಿಹನ್ ಮತ್ತು ಅಕ್ಷಿತ್ ತೃತೀಯ ಸ್ಥಾನ ಪಡೆದಿದ್ದಾರೆ.ಇವರಿಗೆ ಕರಾಟೆ ಶಿಕ್ಷಕ ರೆಹಮಾನ್ ರವರು ತರಬೇತಿ ನೀಡಿರುತ್ತಾರೆ.

Exit mobile version