ರೇಷ್ಮೆರೋಡು: ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗುತ್ತಿರುವ ತೊಂದರೆಗಳ ಬಗ್ಗೆ ಜನರು ಆಕ್ರೋಶ ಹೊರಹಾಕುತ್ತಿರುವ ಬೆನ್ನಲ್ಲೇ ಗುತ್ತಿಗೆ ಪಡೆದಿರುವ ಡಿ ಪಿ ಜೈನ್ ಕಂಪೆನಿಯ ಕಾರ್ಮಿಕರು ಸಂಬಳಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮೂರು ತಿಂಗಳಿಂದ ಆಗಿಯೇ ಇಲ್ಲ ಸಂಬಳ ಕಾರ್ಮಿಕರಿಗೆ ಮೇ, ಜೂನ್, ಜುಲೈ ತಿಂಗಳ ಸಂಬಳವನ್ನು ಕಂಪೆನಿ ಇನ್ನೂ ಕೊಟ್ಟಿಲ್ಲ.
ಈ ಹಿನ್ನಲೆಯಲ್ಲಿ ಕಾರ್ಮಿಕರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದಿನ ಪ್ರತಿಭಟನೆಯಿಂದಾಗಿ 25ಸಾವಿರಕ್ಕಿಂತ ಕಡಿಮೆ ಸಂಬಳ ಇರುವ ಕಾರ್ಮಿಕರಿಗೆ ಎರಡು ತಿಂಗಳ ಸಂಬಳ ನೀಡಲಾಗಿತ್ತು.ಆದರೆ 25 ಸಾವಿರಕ್ಕಿಂತ ಹೆಚ್ಚು ಸಂಬಳ ಇರುವವರಿಗೆ ಇಲ್ಲಿವರೆಗೂ ಸಂಬಳವಾಗಿಲ್ಲ.ಪ್ರತಿಭಟನೆ ವೇಳೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸ್ತಾ ಇದ್ರೆ, ಅಧಿಕಾರಿ ವರ್ಗವೂ ಕೂಡ ಯಾವುದೇ ಉತ್ತರ ನೀಡಲಾಗದೆ ಅಸಹಾಯಕರಾಗಿ ಕುಳಿತಿದ್ದರು.
ಯಾಕಂದರೆ ಅವರಿಗೂ ಸಂಬಳವಾಗದೇ ಮೂರು ತಿಂಗಳಾಗಿತ್ತು.