Site icon Suddi Belthangady

ಕಳೆಂಜ: ಸಂತ ಸೆಬಾಸ್ಟಿಯನ್ ದೇವಾಲಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರಕ್ಕೆ ಚಾಲನೆ

ಕಳೆಂಜ: ಸಂತ ಸೆಬಾಸ್ಟಿಯನ್ ರವರ ದೇವಾಲಯ ಕಳೆಂಜ ಮತ್ತು ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರವು ಸಂತ ಸೆಬಾಸ್ಟಿಯನ್ ದೇವಾಲಯ ಕಳೆಂಜದಲ್ಲಿ ಆ.04ರಂದು ಪ್ರಾರಂಭಗೊಂಡಿತು.

ಉದ್ಘಾಟನೆಯನ್ನು ನೆರವೇರಿಸಿದ ಕಳೆಂಜ ಸಂತ ಸೆಬಾಸ್ಟಿಯಾನ್ ರವರ ದೇವಾಲಯದ ಧರ್ಮಗುರುಗಳಾದ ಫಾ. ಜೋಸೆಫ್ ವಾಳೂಕಾರನ್ ಮಾತನಾಡಿ ಈ ಶಿಬಿರದ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಿ ಎಂದರು. ಪುತ್ತೂರು ನೆಮ್ಮದಿ ವೆಲ್ ನೆಸ್ ಸೆಂಟರ್ ನ ಮಾಲಕರಾದ ಕೆ. ಪ್ರಭಾಕರ್ ಸಾಲಿಯನ್ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಕಳೆಂಜ ವಿನ್ಸೆಂಟ್ ಡಿ ಪೌಲ್ ಸೊಸೈಟಿ ಅಧ್ಯಕ್ಷ ಥೋಮಸ್ ಪನ ಚಿಕ್ಕಲ್, ಕಳೆಂಜ ಸಂತ ಸೆಬಾಸ್ಟಿಯಾನ್ ದೇವಾಲಯದ ಟ್ರಸ್ಟಿ ಜೋಳಿ ತಟ್ಟಾಂ ಪರಂಬಿಲ್‌ ಆಗಮಿಸಿದ್ದರು.

ಶಿಬಿರವು ಆ.04ರಿಂದ ಆ.18ರವರೆಗೆ ಪೂರ್ವಾಹ್ನ 9.30ರಿಂದ ಅಪರಾಹ್ನ 4:30 ವರೆಗೆ ಜರುಗಲಿದೆ.

Exit mobile version