Site icon Suddi Belthangady

ನಾರ್ಯ ಪೊದಿಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜೆ

ಧರ್ಮಸ್ಥಳ: ನಾರ್ಯ ಎರ್ಮುಂಜ ಬೈಲ್ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರಿಗೆ ಆಟಿ ಅಮವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ಭಕ್ತಾದಿಗಳಿಗೆ ವಿಶೇಷವಾಗಿ ತೀರ್ಥಸ್ಥಾನ ನೆರವೇರಿತು. ಕ್ಷೇತ್ರದಲ್ಲಿ ಊರ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.ಪ್ರತಿ ತಿಂಗಳು ಸಂಕ್ರಾಂತಿಯಂದು ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮವು ನಡೆಯಲಿರುವುದು ಭಕ್ತಾದಿಗಳು ಭಾಗವಹಿಸಬೇಕು ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.

ನಾಗರಪಂಚಮಿಯ ದಿನದಂದು ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version