ಮುಂಡೂರು: ಭಾರಿ ಮಳೆಯಿಂದಾಗಿ ಮುಂಡೂರು ಗ್ರಾಮದ ಸೀತರಾಮ್ ಆಚಾರ್ಯ ಹಾಗೂ ರಮೇಶ್ ಆಚಾರ್ಯರವರ ಮನೆಯ ಹಿಂಭಾಗ ಗುಡ್ಡ ಕುಸಿದು ಮನೆಗೆ ಹಾನಿಯಾಗಿದ್ದು ಆ.03ರಂದು ಭಾರತೀಯ ಜನತಾ ಪಾರ್ಟಿಯ ಮಂಡಲದ ಅಧ್ಯಕ್ಷ ಶ್ರೀನಿವಾಸ್ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಎಂ. ಪಾರೆಂಕಿ, ಜಯಾನಂದ ಗೌಡ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.