Site icon Suddi Belthangady

ಇತ್ತೀಚೆಗೆ ನಿಧನರಾದ ಶೈಖುನಾ ಮರ್ಹೂಮ್ ಕೂರಾ ತಂಙಲ್ ಅವರ ಹೆಸರಿನಲ್ಲಿ ಅನುಸ್ಮರಣೆ ಕಾರ್ಯಕ್ರಮ

ಬಂದಾರು: ಇಲ್ಲಿನ ಬಟ್ಲಡ್ಕ ಜುಮಾ ಮಸೀದಿಯಲ್ಲಿ ಇತ್ತೀಚೆಗೆ ನಿಧನರಾದ ಶೈಖುನಾ ಮರ್ಹೂಮ್ ಕೂರಾ ತಂಙಲ್ ಅವರ ಹೆಸರಿನಲ್ಲಿ ಅನುಸ್ಮರಣೆ ಕಾರ್ಯಕ್ರಮ ಬಹು ಶೈಖುನಾ ಸಾದಾತ್ ತಂಙಲ್ ರವರ ನೇತೃತ್ವದಲ್ಲಿ ಆ.02ರಂದು ಮಗ್ರಿಬ್ ನಮಾಝ್ ಬಳಿಕ ಜಮಾಅತ್ ಅಧ್ಯಕ್ಷ ಮುಹಮ್ಮದ್ ಬಂದಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ವಾಗತ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ನೆರವೇರಿಸಿದರು.ಉದ್ಘಾಟನೆ ಸ್ಥಳೀಯ ಖತೀಬ್ ಬಹು ಮುಹಮ್ಮದ್ ಆಸಿಫ್ ಸಖಾಫಿ ನಡೆಸಿದರು.ಪದ್ಮುಂಜ ಖತೀಬ್ ಮುಹಮ್ಮದ್ ನಿಜಾಮುದ್ದೀನ್ ಸಖಾಫಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಜಮಾಅತ್ ಉಪಾಧ್ಯಕ್ಷ ಸುಲೈಮಾನ್ ಬಂದಾರು, ಬಹು! ಮನ್ಸೂರ್ ಮುಈನಿ ಅದನಿ, ಕೋಶಾಧಿಕಾರಿ ಈಸುಬು ಪೇರಲ್ತಪಲಿಕೆ, ಅದಂ ಅಲ್ ಮದೀನಾ ಭಾಗವಹಿಸಿದ್ದರು.

Exit mobile version