Site icon Suddi Belthangady

ಮುಂಡತ್ತೋಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಲ್ ಬುಲ್ ಘಟಕ ಉದ್ಘಾಟನೆ- ಪೋಷಕರ ಸಭೆ

ಉಜಿರೆ: ಮುಂಡತ್ತೋಡಿ ಪೆರ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.30ರಂದು ಸ್ಕೌಟ್ ಗೈಡ್ ವಿಭಾಗದ ಕಿರಿಯ ಮಕ್ಕಳ ಬುಲ್ ಬುಲ್ ವಿಭಾಗ ಉದ್ಘಾಟನೆ ಮಾಡಲಾಯಿತು.

ಗೈಡ್ ಶಿಕ್ಷಕಿ ತ್ರಿಶಾಲ ಜೈನ್ ಉದ್ಘಾಟಿಸಿ ಶುಭ ಕೋರಿದರು.ಅತಿಥಿಗಳಾಗಿ ಗೈಡ್ ಶಿಕ್ಷಕಿ ಉಷಾ, ಶಿಕ್ಷಣ ಇಲಾಖೆಯ ಸಿ.ಆರ್.ಪಿ ಪ್ರತಿಮಾ ಭಾಗವಹಿಸಿದ್ದರು.

ಶಾಲಾ ಎಸ್ ಡಿ ಎಂ ಸಿ ಅದ್ಯಕ್ಷೆ ರೇವತಿ, ಉಪಾಧ್ಯಕ್ಷ ದೇವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪೋಷಕರು ಹಾಜರಿದ್ದು ಪೋಷಕರ ಸಭೆಯನ್ನು ನಡೆಸಲಾಯಿತು.

ಮುಖ್ಯ ಶಿಕ್ಷಕಿ ಸೇವಂತಿ ಸ್ವಾಗತಿಸಿ ವಂದಿಸಿದರು.

Exit mobile version