Site icon Suddi Belthangady

ಸುರೇಶ್ ಗೌಡ ಪಟ್ರಮೆ ನಿಧನ

ಪಟ್ರಮೆ ಗ್ರಾಮದ ಬಲ್ಲಿದಡ್ಡ ನಿವಾಸಿ ತಿಮ್ಮಪ್ಪ ಗೌಡ (ಬಾಲು ಗೌಡ)ರವರ ಪುತ್ರ ಸುರೇಶ್ ಗೌಡ (30ವ)ರವರು ಜು.30ರಂದು ರಾತ್ರಿ ನಿಧನರಾಗಿದ್ದಾರೆ.

ಜು.30ರಂದು ಸಂಜೆ ಪಟ್ರಮೆ ಪೇಟೆಗೆ ಬಂದಿದ್ದ ಸುರೇಶ್ ಗೌಡ ಅವರು ನಂತರ ಅಲ್ಲಿಂದ ತೆರಳಿ ರಾತ್ರಿ ಮನೆಯಲ್ಲಿ ಮಲಗಿದ್ದವರು ಬೆಳಿಗ್ಗೆ ಏಳದೇ ಇರುವುದನ್ನು ನೋಡಿದ ಮನೆಯವರು ಅವರನ್ನು ಎಬ್ಬಿಸಲು ಪ್ರಯತ್ನ ಪಟ್ಟಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ ಎಂದು ತಿಳಿದು ಬಂದಿದೆ.ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಮೃತರು ತಂದೆ ತಿಮ್ಮಪ್ಪ ಗೌಡ ಯಾನೆ ಬಾಲು ಗೌಡ, ತಾಯಿ ಸೀತಾ, ಸಹೋದರಿ ಸುಮಿತ್ರಾ ಮತ್ತು ಸಹೋದರ ಸುದೇಶ್ ಅವರನ್ನು ಅಗಲಿದ್ದಾರೆ.

Exit mobile version