Site icon Suddi Belthangady

ಉಜಿರೆ: ಎಸ್.ಡಿ.ಎಂ ಮಹಿಳಾ ಐಟಿಐ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ- ಜೀವನದಲ್ಲಿ ಆದರ್ಶ ಇಲ್ಲದಿದ್ದರೆ ಜೀವನ ವ್ಯರ್ಥ: ಡಾ.ದಿವಾಕರ ಕೆ.

ಉಜಿರೆ: ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಅದ್ಯಾಪಕರ ಪಾತ್ರವು ಮಹತ್ವವಾಗಿದೆ. ವಿದ್ಯಾರ್ಥಿಗಳಿಗೆ ಪುಸ್ತಕದ ವಿದ್ಯಾಭ್ಯಾಸದ ಜೊತೆಗೆ ಜೀವನ ಪಾಠ ಹೇಳುವ ಮೂಲಕ ವಿದ್ಯಾರ್ಥಿಗಳ ಹಾಗೂ ದೇಶದ ಅಭಿವೃದ್ಧಿಯನ್ನು ಕಾಣಬಹುದು. ಅರಿವಿಲ್ಲ ಮಾಡುವ ತಪ್ಪಿಗೆ ಕ್ಷಮೆ ಇದೆ ಆದರೆ ಗೊತ್ತದ್ದು ಮಾಡುವ ತಪ್ಪಿಗೆ ಕ್ಷಮೆ ಇಲ್ಲ. ಜೀವನದಲ್ಲಿ ಮೌಲ್ಯಗಳಿರಬೇಕು. ಆದರ್ಶದಿಂದ ಬದುಕಲು ಕಲಿಯೋಣ ಇಲ್ಲದಿದ್ದರೆ ಬದುಕು ವ್ಯರ್ಥ ಎಂದು ಉಜಿರೆ ಎಸ್.ಡಿ.ಎಂ ಮಹಿಳಾ ಐಟಿಐ ವಿದ್ಯಾರ್ಥಿನಿಯರ ಬಿಳ್ಕೋಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಆಟಿದ/ತುಳುನಾಡಿನ ಮಹತ್ವ ಸಾರುವ ಹಾಡು, ತುಳುವಿನಲ್ಲಿ ತಿಂಗಳ ಹೆಸರುಗಳು ಹಾಗೂ ತುಳುನಾಡ ಹಬ್ಬದ ವೈಶಿಷ್ಟ್ಯ ಕುರಿತು ವಿವರಣೆ ನೀಡಿದರು.ವೇದಿಕೆಯಲ್ಲಿ ಪ್ರಾಂಶುಪಾಲ ವಿ.ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.

ನಂತರ ವಿದ್ಯಾರ್ಥಿನಿಯರು ತಾವೇ ತಯಾರಿಸಿದ ಮಳೆಗಾಲದ ವಿವಿಧ ಬಗೆಯ ಆಹಾರ ಪದಾರ್ಥದ ರುಚಿಯನ್ನು ಎಲ್ಲರಿಗೂ ಹಂಚಿ ಸಂಭ್ರಮಿಸಿದರು.

Exit mobile version