ಕಾಶಿಪಟ್ಣ: ಕಾಶಿಪಟ್ಣ ಮೂಡುಬಿದ್ರಿ ಹೋಗುವ ರಸ್ತೆ ಪಿಂಟೋ ನಗರದಲ್ಲಿ ಸಂಪೂರ್ಣ ಜಲಾವೃತಗೊಂಡಿದ್ದು 2 ಮನೆಗಳನ್ನು, ಕಾಶಿಪಟ್ಣ ಬಡಕೋಡಿ ರಸ್ತೆ ಬೊಲ್ಪಾಳೆ ಎಂಬಲ್ಲಿ ರಸ್ತೆಗೆ ನೀರು ಹರಿದು ರಸ್ತೆ ಬ್ಲಾಕ್ ಆಗಿದ್ದು ಅಲ್ಲಿಯ ಎಮಿಲ್ಡರವರನ್ನು ಮನೆ ಖಾಲಿ ಮಾಡಲಾಗಿದೆ.
ಪದ್ದಂಡಡ್ಕ ರಸ್ತೆ ಮರ ಬಿದ್ದು ಬ್ಲಾಕ್ ಆಗಿದ್ದು, ಪಾಲಾರ್ ಎಸ್.ಸಿ. ಕಾಲೋನಿಗೆ ನೀರು ಬಿದ್ದು 2 ಮನೆಯಲ್ಲಿದ್ದವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಪುತ್ತಿಲ ಎಂಬಲ್ಲಿ ಬೈಲು ಗದ್ದೆ ಸಂಪೂರ್ಣ ಮುಳುಗಿ ಸಂಪರ್ಕ ಕಡಿತ ಗೊಂಡಿದೆ. ಬಡೆಕೊಡಿಯಲ್ಲಿ ಸೇಸಪ್ಪ ನಾಯ್ಕರ ಮನೆಗೆ ನೀರು ಬಿದ್ದು ಮನೆ ಸಾಮಾಗ್ರಿ ಸಂಪೂರ್ಣ ನೀರಿನಿಂದ ಒದ್ದೆಯಾಗಿದ್ದು ಮನೆಯಲ್ಲಿದ್ದ ಸಾಮಾಗ್ರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ ಎಂದು ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ ಮತ್ತು ತಂಡ ರಾತ್ರಿ ಇಡಿ ಕಾರ್ಯಪ್ರವುರ್ತಾರಾಗಿ ಎಲ್ಲರನ್ನು ಸುರಕ್ಷಿತದಿಂದ ಕಾಪಾಡಿದ್ದಾರೆ.
ಕೂಡಲೇ ತಹಶೀಲ್ದಾರ್, ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮಳೆಗೆ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಒದಗಿಸಿಕೊಡಲು ವಿನಂತಿಸಿದ್ದಾರೆ.