Site icon Suddi Belthangady

ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ- ನಿವ್ವಳ ರೂ.1.86 ಕೋಟಿ ಲಾಭ- ಹಿರಿಯ ಸದಸ್ಯರಿಗೆ ಸನ್ಮಾನ- ಶೈಕ್ಷಣಿಕ ಸಾಧಕರಿಗೆ ಗೌರವ

ಧರ್ಮಸ್ಥಳ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಜು.30ರಂದು ಸಂಘದ ಸಾಧನ ಕಟ್ಟಡದ ಅಟಲ್ ಜೀ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಪ್ರೀತಮ್ ಡಿ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು ಆರ್ಥಿಕ ವರ್ಷದಲ್ಲಿ ನಿವ್ವಳ ರೂ.1,86,83,680/ ಲಾಭ ಗಳಿಸಿದೆ. ಸದಸ್ಯರಿಗೆ ಶೇ.16 ಲಾಭಾಂಶ ಘೋಷಣೆ ಮಾಡಲಾಯಿತು.ಸಭೆಯಲ್ಲಿ ಸಂಘದ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಂಘದ 12 ಮಂದಿ ಹಿರಿಯ ಸಹಕಾರಿ ಸದಸ್ಯರನ್ನು, ಕೃಷಿ ಸಾಧಕ ಜಾರಪ್ಪ ಗೌಡ ನಾರ್ಯ ಇವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಶಾಂಭವಿ ರೈ, ಉಮಾನಾಥ, ಶೀನ, ಧನಲಕ್ಷ್ಮೀ ಜನಾರ್ಧನ, ಪ್ರಭಾಕರ ಗೌಡ ಬೋಲ್ಮ, ನೀಲಾಧರ ಶೆಟ್ಟಿ, ಪ್ರಸನ್ನ ಹೆಬ್ಬಾರ್, ಚಂದ್ರಶೇಖರ, ವಿಕ್ರಮ್ ಗೌಡ, ತಂಗಚ್ಚನ್, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ಸುದರ್ಶನ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಸತೀಶ್ ಹೊಳ್ಳ ವರದಿ ಮತ್ತು ಲೆಕ್ಕ ಪತ್ರ ವಾಚಿಸಿದರು.

ಹಿರಿಯ ದೈಹಿಕ ಠೇವಣಿ ಸಂಗ್ರಾಹಕ ಎ.ಎಸ್.ಲೋಕೇಶ್ ಶೆಟ್ಟಿ, ಸಿಬ್ಬಂದಿ ಉಷಾ ಕಾರ್ಯಕ್ರಮ ನಿರ್ವಹಿಸಿದರು.ಸಿಬ್ಬಂದಿಗಳು ಸಹಕರಿಸಿದರು.

ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರು, ಜನಪ್ರತಿನಿಧಿನಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.

Exit mobile version