Site icon Suddi Belthangady

ಮಡಂತ್ಯಾರು: ರೋಟರಿ ಕ್ಲಬ್ ವತಿಯಿಂದ ಪಾರೆಂಕಿ ಬಿಸಿಎಂ ಹಾಸ್ಟೆಲ್ ಗೆ ಟಿ.ವಿ ಕೊಡುಗೆ

ಮಡಂತ್ಯಾರು: ವಿವಿಧ ಸೇವಾ ಕಾರ್ಯಗಳಿಂದ ಪರಿಸರದಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ರೋಟರಿ ಕ್ಲಬ್ ಮಡಂತ್ಯಾರು ಈ ವರ್ಷ ರೋ ನಿತ್ಯಾನಂದ ಬಿ. ಇವರ ಸಾರಥ್ಯದಲ್ಲಿ ಪಾರೆಂಕಿ ಬಿಸಿಎಂ ಹಾಸ್ಟೆಲ್ ಇಲ್ಲಿನ ವಿದ್ಯಾರ್ಥಿನಿಯರಿಗೆ ಬಹಳಷ್ಟು ಅಗತ್ಯವಿದ್ದ ದೊಡ್ಡ ಪರದೆಯ ಟಿವಿಯನ್ನು ನೀಡಿ ಸಹಕರಿಸಿದೆ.

ಈ ಸಂದರ್ಭದಲ್ಲಿ ಸಹಕರಿಸಿದ ರೋ ಶ್ರೀದರ್ ಭಟ್, ರೋ ಜಯಂತ ಶೆಟ್ಟಿ, ರೋ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಹಾಸ್ಟೆಲ್ ಮೇಲ್ವಿಚಾರಕ ಎಸ್.ಆರ್.ನಾಯಕ್ ಟಿ.ವಿಯನ್ನು ಸಾಂಕೇತಿಕವಾಗಿ ಪಡೆದುಕೊಂಡು ಕ್ಲಬ್ ಗೆ ಧನ್ಯವಾದಗಳನ್ನು ತಿಳಿಸಿದರು.

Exit mobile version