Site icon Suddi Belthangady

ಮಡಂತ್ಯಾರು: ರೋಟರಿ ಕ್ಲಬ್ ವತಿಯಿಂದ ಕಾರ್ಗಿಲ್ ದಿವಸ್ ಆಚರಣೆ

ಮಡಂತ್ಯಾರು: ರೋಟರಿ ಕ್ಲಬ್ ಆಶ್ರಯದಲ್ಲಿ ನಾಲ್ಕು ಮಂದಿ ನಿವೃತ್ತ ಯೋಧರನ್ನು ಸನ್ಮಾನಿಸಿ ಕಾರ್ಗಿಲ್ ದಿವಸ್ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಕಾಂತಪ್ಪ ಗೌಡ ಹಟ್ಟತ್ತೋಡಿ, ರಾಮ್ ಭಟ್, ಮಂಜುನಾಥ ಗೌಡ, ಹೆರಾಲ್ಡ್ ಇವರನ್ನು ಕ್ಲಬ್ ನ ಅಧ್ಯಕ್ಷ ರೋ ನಿತ್ಯಾನಂದ ಬಿ., ಸ್ಥಾಪಕ ಅಧ್ಯಕ್ಷ ರೋ ಮೋನಪ್ಪ ಪೂಜಾರಿ ಕಂಡೆತ್ಯಾರು ಮತ್ತು ಕ್ಲಬ್ ನ ಸರ್ವ ಪದಾಧಿಕಾರಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪೂರ್ವ ಅಧ್ಯಕ್ಷ ರೋ ಜಯಂತ ಶೆಟ್ಟಿ ಬಿ., ರೋ ಶ್ರೀಧರ್ ಭಟ್, ರೊ.ರೊನಾಲ್ಡ್ ಸಿಕ್ವೇರಾ, ಕಾರ್ಯದರ್ಶಿ ತುಳಸಿದಾಸ್ ಪೈ ಹಾಗೂ ಕ್ಲಬ್ ನ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಉಪಸ್ಥಿತರಿದ್ದರು.

ರೋ ನಾರಾಯಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version