ಬೆಳ್ತಂಗಡಿ: ಹಿರಿಯರ ಬದುಕು ಪರಿಸರದ ಅಹಾರ ಪದ್ದತಿಗಳಿಂದ ನಡೆದಿದ್ದು ಇಂತಹ ಕಷ್ಡಕರ ಜೀವನಕ್ಕೆ ಅನೇಕ ಸಂಪ್ರದಾಯಗಳು ಬೆಳೆದಿದ್ದು ಇದು ಉತ್ತಮ ಅರೋಗ್ಯಕ್ಕೆ ಸಹಕಾರಿಯಾಗಿದೆ.ಇದನ್ಬು ಇಂದಿನ ಮಕ್ಕಳಿಗೆ ತಿಳಿಸುವ ಅಗತ್ಯವಿದ್ದು ಅದಕ್ಕೆ ಇಂತಹ ಆಟಿ ಕೂಟ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕೆ.ಶೈಲೇಶ್ ಕುಮಾರ್ ಹೇಳಿದರು.
ಅವರು ಜು.28ರಂದು ತುಳುನಾಡ್ ಒಕ್ಕೂಟ ಬೆಳ್ತಂಗಡಿ ಇದರ ವತಿಯಿಂದ ನಡೆದ ನಾಲ್ಕನೆ ವರ್ಷದ ಚೆನ್ನೆಮಣೆ ಮತ್ತು ಸಂದೀ ಪಾರ್ದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತುಳು ಭಾಷೆ ಸಂಸ್ಕತಿಗೆ ಅನೇಕ ವರ್ಷಗಳ ಇತಿಹಾಸ ಇದ್ದು ದೈವಾರಾದನೆಯ ನೆಲೆಗಟ್ಟಿನಲ್ಲಿ ಇದಕ್ಜೆ ಸಾಕ್ಷವಿದೆ ಎಂದರು. ಮಂಗಳೂರು ಸಂದ್ಯಾ ಕಾಲೇಜಿನ ತುಳು ಉಪನ್ಯಾಸಕಿ ಸಂದ್ಯಾ ಆಳ್ವ ಮಾತನಾಡಿ ತುಳು ಭಾಷೆ ನಮ್ಮ ತಾಯಿ ಭಾಷೆ ಇದಕ್ಕಿರುವ ಮಹತ್ವ ಯಾವ ಭಾಷೆಗು ಇಲ್ಲ ಇದನ್ನು ಅರಿತುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಸಂದಿ ಪಾರ್ದನ, ಚೆನ್ನೆಮಣೆ ಆಟದ ಇತಿಹಾಸ ತಿಳಿದರೆ ಯಾರು ಕೂಡ ತುಳು ಭಾಷೆಯನ್ನು ಅವಮಾನಿಸಲು ಸಾದ್ಯವಿಲ್ಲ ಎಂದರು.
ತುಳುನಾಡ್ ಒಕ್ಕೂಟದ ಕೇಂದ್ರ ಸಮಿತಿ ಅದ್ಯಕ್ಷ ಶೈಲೇಶ್ ಅರ್ ಜೆ ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಮನೋಹರ್ ಬಳಂಜ, ಕೊಯ್ಯೂರು ಸ.ಪ.ಪೂ.ಕಾಲೇಜು ಉಪನ್ಯಾಸಕ ಮೋಹನ್ ಗೌಡ, ತೆರಿಗೆ ಸಲಹೆಗಾರರಾದ ಟಿ.ಜೆ ಮೋರಸ್ ಉಜಿರೆ, ತುಳುನಾಡ್ ಒಕ್ಕೂಟದ ಕಾರ್ಯದರ್ಶಿ ವಿನ್ಸೆಂಟ್ ಲೋಬೋ, ಉಪಸ್ಥಿತರಿದ್ದರು.
ತುಳುನಾಡ್ ಒಕ್ಕೂಟದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ರಾಜೀವ್ ಬಿ. ಹೆಚ್. ಪ್ರಾಸ್ತಾವಿಕವಾಗಿ ಮಾತನಾಡಿದರು.ತುಳುನಾಡ್ ಒಕ್ಕೂಟದ ಕಾನೂನು ಸಲಹೆಗಾರ ಸುರೇಶ್ ಸ್ವಾಗತಿಸಿ, ಹರೀಶ್ ವಂದಿಸಿದರು.
ಪ್ರಸನ್ನ ಕಾಲೇಜಿನ ಉಪನ್ಯಾಸಕಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಅಯ್ಕೆಯಾದ ಕೆ ಶೈಲೇಶ್ ಕುಮಾರ್ ಮತ್ತು ಖ್ಯಾತ ನಾಟಿ ವೈದ್ಯ ಶ್ರಿನಿವಾಸ್ ಪೂಜಾರಿ ಇವರನ್ನು ತುಳುನಾಡ್ ಒಕ್ಕೂಟದ ವತಿಯಿಂದ ಗೌರವಿಸಲಾಯಿತು.