ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಜೈನ ಪಾಠಗಳ ಉದ್ಘಾಟನಾ ಸಮಾರಂಭದಲ್ಲಿ ನರಸಿಂಹರಾಜಪುರದ ಅತಿಶಯ ಕ್ಷೇತ್ರ ಬಸ್ತಿಮಠದ ಪರಮಪೂಜ್ಯ ಡಾ.ಸ್ವಸ್ತಿಶ್ರೀ ಲಕ್ಷ್ಮೀ ಸೀನ ಭಟ್ಟಾರಕ ಪಟ್ಟಾಚಾರ‍್ಯವರ‍್ಯ ಮಹಾಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನವನ್ನಿತ್ತರು.
ಬಳಿಕ ಇದೇ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಕಂಬಳ, ಕ್ರೀಡೆ ಹಾಗೂ ಇನ್ನಿತರ ಬೇರೆ ಬೇರೆ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ‘ಬೆದ್ರ ಫ್ರೆಂಡ್ಸ್’ ಇದರ ರುವಾರಿಯಾಗಿ ಅನೇಕ ಸೇವಾಕಾರ್ಯಕ್ರಮಗಳನ್ನು ಕೈಗೊಂಡ ಸ್ನೇಹ ಜೀವಿ, ಸರಳಜೀವಿ ಹಾಗೂ ಮೂಡಬಿದ್ರೆಗೆ ಆಪ್ತರಾಗಿರುವ ಮೂಡುಬಿದಿರೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನ್ಯೂಪಡಿವಾಳ್ಸ್‌ನ ಹರ್ಷವರ್ಧನ್ ಪಡಿವಾಳ್ ಅವರನ್ನು ಉಪಸ್ಥಿತ ಗಣ್ಯರ ಸಮಕ್ಷಮದಲ್ಲಿ ಗೌರವಿಸಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಾರಾವಿ ಬಸದಿ ಆಡಳಿತ ಸಮಿತಿ ಅಧ್ಯಕ್ಷರಾಗಿರುವ ಬಿ.ನಿರಂಜನ ಅಜ್ರಿ, ರಾಮೇರಗುತ್ತು ಅವರನ್ನು ಅವರ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಕೊಡುಗೆಗಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ಶ್ರೀ ಕುಲದೀಪ್ ಜೈನ್, ಚೌಟರ ಅರಮನೆ ಮೂಡಬಿದ್ರೆ ಕೃಷ್ಣರಾಜ್ ಹೆಗ್ಡೆ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆಡಳಿತ ನಿರ್ದೇಶಕರಾದ ಡಾ. ಬಿ.ಪಿ ಸಂಪತ್‌ಕುಮಾರ್ ನಿರೂಪಿಸಿದರು.