ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರಿಗೆ ಬೆದರಿಕೆ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಅಂಗರಕ್ಷಕ ಭದ್ರತ ಪುನರ್ ವಿಮರ್ಶನ ಸಮಿತಿಯ ಸೂಚನೆ ಮೇರೆಗೆ ತತ್‌ಕ್ಷಣಕ್ಕೆ ಜಾರಿಗೆ ಬರುವಂತೆ ದ.ಕ. ಪೊಲೀಸ್ ಅಧೀಕ್ಷಕರ ಆದೇಶದ ಮೇರೆಗೆ ಜು.28ರಂದು ಜಾರಿಗೆ ಬರುವಂತೆ ಓರ್ವ ಅಂಗರಕ್ಷನನ್ನು ನಿಯೋಜಿಸಲಾಗಿದೆ.